No menu items!
15.2 C
Munich
Wednesday, April 29, 2026

ಸಿಂಹಗಳ ಸರಣಿ‌ಸಾವಿಗೆ ಇದೇ ಕಾರಣ…!

Must read

ಅಹಮದಾಬಾದಿನ ಗಿರ್ ಅರಣ್ಯ ಪ್ರದೇಶದಿಂದ ಸಂರಕ್ಷಣಾ ಪ್ರದೇಶಕ್ಕೆ ಸ್ಥಳಾಂತರಿಸಲ್ಪಟ್ಟಿದ್ದ 2 ಸಿಂಹಗಳು ಸಾವನ್ನಪ್ಪಿದ್ದು, ಇದರೊಂದಿಗೆ ಗಿರ್ ಅರಣ್ಯ ಪ್ರದೇಶದಲ್ಲಿ ಸಾವಿಗೀಡಾದ ಸಿಂಹಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಈ ಪೈಕಿ 11 ಸಿಂಹಗಳು ಕಾದಾಟದಲ್ಲಿ ಹಾಗೂ ಉಳಿದ 12 ಸಿಂಹಗಳು ಸೋಂಕಿನಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

 

ಸಿಂಹಗಳ ಸರಣಿ ಸಾವಿನ ಬಗ್ಗೆ ಗುಜರಾತ್ ಸಿಎಂ ವಿಜಯ್ ರೂಪಾನಿ ಕಳವಳ ವ್ಯಕ್ತಪಡಿಸಿದ್ದಾರೆ. ಸೋಂಕಿನಿಂದಾಗಿ ಇಷ್ಟೊಂದು ಪ್ರಮಾಣದಲ್ಲಿ ಸಿಂಹಗಳು ಸಾವಿಗೀಡಾಗುತ್ತಿರೋದು ದುರಾದೃಷ್ಟಕರ ಘಟನೆ ಎಂದು ಅವರು ಹೇಳಿದ್ದಾರೆ. ದೆಹಲಿ ಹಾಗೂ ಪುಣೆಯಿಂದ ತಜ್ಞ ವೈದ್ಯರನ್ನು ಕರೆಸಿ ಸಿಂಹಗಳ ಆರೋಗ್ಯ ತಪಾಸಣೆ ಹಾಗೂ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಲಾಗಿದೆ ಎಂದಿದ್ದಾರೆ ಅವರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article