ಇತ್ತೀಚೆಗೆ ಮಿಸಾಳ್ ಭಾಜಿ ವಿಶ್ವದ ರುಚಿಯಾದ ಆಹಾರ ಎಂಬ ಖ್ಯಾತಿಗೆ ಪಾತ್ರವಾಗಿ ದೇಶಕ್ಕೆ ಹೆಮ್ಮೆ ತಂದುಕೊಟ್ಟಿತ್ತು. ಈಗ ಭಾರತಕ್ಕೆ ಮತ್ತೊಂದು ಗರಿ ಮೂಡಿದೆ..! ಅದೇನೆಂದರೆ ಭಾರತದ ಒಂದು ಹೋಟೆಲ್ ಇಡೀ ವಿಶ್ವದಲ್ಲೇ ಅತ್ಯುತ್ತಮ ಹೋಟೆಲ್ ಎಂಬ ಖ್ಯಾತಿಗೆ ಪಾತ್ರವಾಗಿದೆ..!
ಯೆಸ್..! ರಾಜಸ್ಥಾನ ಉಮೇದ್ ಭವನ್ ಅರಮನೆಗೆ ವಿಶ್ವದ ಅತ್ಯುತ್ತಮ ಹೋಟೆಲ ಎಂಬ ಬಿರುದು ಸಿಕ್ಕಿದೆ..! ಕಳೆದ ವರ್ಷ ಸುಮಾರು 840 ಪ್ರವಾಸಿಗರ ಪ್ರತಿಕ್ರಿಯೆಯ ಆಧಾರದ ಮೇಲೆ ಈ ಬಿರುದನ್ನು ನೀಡಲಾಗಿದೆ. ಇದರಲ್ಲಿ 767 ಮಂದಿ ಅತ್ಯುತ್ತಮ ಹೊಟೇಲ್ ಎಂದು ಅಭಿಪ್ರಾಯಪಟ್ಟರೆ, 10 ಮಂದಿ ಇಲ್ಲಿ ಕೆಟ್ಟ ಅನುಭವವಾಗಿದೆ ಎಂದಿದ್ದಾರೆ.
ಈ ಕಟ್ಟಡವನ್ನು ನಿರ್ಮಿಸಿದ ಮಹಾರಾಜ ಉಮೇದ್ ಸಿಂಗ್ ಹೆಸರನ್ನೇ ಈ ಹೊಟೇಲ್ ಗೆ ಇಡಲಾಗಿದೆ. ಮರಳುಗಲ್ಲಿನಲ್ಲಿ ಈ ಹೋಟೆಲ್ ನಿರ್ಮಿಸಲಾಗಿದೆ. ಕಲ್ಲನ್ನು ಬಿಟ್ಟು ಯಾವುದೇ ಪದಾರ್ಥವನ್ನು ಇದಕ್ಕೆ ಬೆರೆಸಿಲ್ಲ ಎನ್ನುವುದು ಕಟ್ಟಡದ ವಿಶೇಷಗಳಲ್ಲಿ ಒಂದು. ಜಗತ್ತಿನ ಅತಿ ದೊಡ್ಡ ಖಾಸಗಿ ನಿವಾಸಗಳಲ್ಲಿ ಇದು ಒಂದಾಗಿದೆ. 1928-1944ರ ಕಾಲಘಟ್ಟದಲ್ಲಿ ಉಮೇದ್ ಭವನ್ ಅರಮನೆ ಕಟ್ಟಲಾಗಿದೆ. ಈ ಹೋಟೆಲ್ ನಿರ್ಮಾಣದ ಹೆಸರಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿಗೆ ಕೆಲಸ ಸಿಕ್ಕಿತ್ತು. 20 ಎಕರೆ ವಿಸ್ತೀರ್ಣದಲ್ಲಿರುವ ಈ ಅರಮನೆ ನಿರ್ಮಿಸಲು ಸುಮಾರು 16 ವರ್ಷ ವ್ಯಯಿಸಲಾಗಿದೆ.
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿ ಹುಟ್ಟುಹಬ್ಬವನ್ನು ಇಲ್ಲೇ ಆಚರಿಸಿದ್ದರು. ದೇಶದ ಗಣ್ಯಾತಿಗಣ್ಯರು ಈ ವೇಳೆ ಪಾರ್ಟಿಗೆ ಬಂದಿದ್ದರು. ಕೆಲ ಸಿನಿಮಾ ಹಾಗೂ ಧಾರಾವಾಹಿ ಶೂಟಿಂಗ್ ಕೂಡ ಇಲ್ಲಿ ಆಗ್ತಿರುತ್ತೆ. ಅಲ್ಲದೇ ಇಲ್ಲಿ ಉಮೇದ್ ಸಿಂಗ್ ರಾಣಿಗಾಗಿ ಮಹಾರಾಣಿ ಕೊಠಡಿ ನಿರ್ಮಿಸಲಾಗಿದೆ. ಅದು ಸಂಪೂರ್ಣ ಅಮೃತಶಿಲೆಯಲ್ಲಿದೆ. ಇನ್ನು ಮಹಾರಾಜನ ಕೊಠಡಿಯಲ್ಲಿ ಸಿಂಹ ಹಾಗೂ ಹುಲಿಯ ಮಾನ್ಯೂಮೆಂಟ್ಸ್ ಇದೆ. ಭೋಜನ ಶಾಲೆ, ಸ್ಪಾ ಸೌಲಭ್ಯ, ಅತ್ಯುನ್ನತವಾದ ಸ್ನಾನಗೃಹವಿದೆ. ಇದೂ ಅಲ್ಲದೇ ರಾಯಲ್ ಕೊಠಡಿಯೊಂದಿದ್ದು, ಅದು ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಭೋಜನ ಶಾಲೆ, ಸ್ಪಾ, ಸ್ನಾನಗೃಹ ಎಲ್ಲವೂ ಅಲ್ಲಿವೆ. ಐತಿಹಾಸಿಕ ಕೊಠಡಿಯಲ್ಲಿ ಹಳೆಯ ವರ್ಣಚಿತ್ರಗಳನ್ನು ಸಂಗ್ರಹಿಸಿಡಲಾಗಿದೆ.
ಒಂದು ಕಾಲದಲ್ಲಿ ಅರಮನೆಯಾಗಿದ್ದ ಈ ಕಟ್ಟಡ ಇಂದು ಹೋಟೆಲ್ ಆಗಿ ಪರಿವರ್ತನೆ ಹೊಂದಿದೆ. ಆ ಮೂಲಕ ವಿಶ್ವದ ಅತ್ಯುತ್ತಮ ಹೋಟೆಲ್ ಎಂಬ ಕೀರ್ತಿಗೆ ಪಾತ್ರವಾಗಿದೆ.
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಗೂಗಲ್ ಜೊತೆ ಕೇಂದ್ರ ಸರ್ಕಾರದ ಒಪ್ಪಂದ ಇಂದಿನಿಂದ ರೈಲು ನಿಲ್ದಾಣಗಳಲ್ಲಿ ಫ್ರೀ ವೈಫೈ..!
ಅಪ್ಪ ಕೂಲಿಯಾಳು, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!
ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!
ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..
ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!