ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ , ಇವರಿಬ್ಬರಲ್ಲಿ ಯಾರು ವೀರಮದಕರಿ ಪಾತ್ರ ಮಾಡಬೇಕು ಎಂಬ ಚರ್ಚೆ, ವಿವಾದ ನಡೆಯುತ್ತಿರುವ ನಡುವೆಯೇ ವೀರಮದಕರಿ ಪಾತ್ರದ ದರ್ಶನ್ ಅವರ ಗಂಡುಗಲಿ ಮದಕರಿ ನಾಯಕ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ…
ವಿಜಯದಶಮಿ ಹಬ್ಬದ ಶುಭಕೋರಿ ಈ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಹಾಗಂತ ಇದನ್ನು ರಿಲೀಸ್ ಮಾಡಿರೋದು ಚಿತ್ರತಂಡವಲ್ಲ. ಬದಲಾಗಿ ದರ್ಶನ್ ಅಭಿಮಾನಿಗಳು.
ವಿವಾದದ ನಡುವೆಯೇ ಒಂದು ಹೆಜ್ಜೆ ಮುಂದೆ ಹೋಗಿ ದರ್ಶನ್ ಅಭಿಮಾನಿಗಳು ಪೋಸ್ಟರ್ ರಿಲೀಸ್ ಮಾಡಿದ್ದು, ವೈರಲ್ ಆಗಿದೆ. ಸುದೀಪ್ ಅಭಿಮಾನಿಗಳು ಕೂಡ ರಿಲೀಸ್ ಮಾಡುವ ಸಾಧ್ಯತೆ ಇದೆ. ಶೀಘ್ರದಲ್ಲೇ ಅದನ್ನೂ ಸಹ ನೋಡಬಹುದೇನೋ?