ಕನ್ನಡ ದೇಶದೊಳ್ ನಮ್ಮ ತುಳುನಾಡು ಸಾಂಗ್ ರಿಲೀಸ್
ಕನ್ನಡ ದೇಶದೊಳ್…ಈಗಾಗಲೇ ತುಂಬಾ ಜನಪ್ರಿಯ ಆಗಿರೋ ಹೆಸರು.
ಕಳೆದ ಮೂರು ವರ್ಷಗಳಿಂದ ಕನ್ನಡದ ಬಗ್ಗೆ ವಿನೂತನ ರೀತಿಯಲ್ಲಿ ಅಭಿಯಾನ ಮಾಡಿಕೊಂಡು ಬರುತ್ತಿರುವ ಯುವಕರ ತಂಡ ಮಾಡಿರುವ ಸಿನಿಮಾವೇ ಈ ‘ಕನ್ನಡ ದೇಶದೊಳ್’….!
ನವೆಂಬರ್ 1 ರಂದು ರಿಲೀಸ್ ಆಗುತ್ತಿದೆ. ಬಹು ನಿರೀಕ್ಷಿತ ಈ ಸಿನಿಮಾದ ನಮ್ಮ ತುಳುನಾಡು ಹಾಡು ಹೀಗಾಗಲೇ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಇದರ ವೀಡಿಯೋ ಸಾಂಗ್ ಇದೇ 19ರಂದು ಕರ್ನಾಟಕ ಮತ್ತು ಕೇರಳದ ಗಡಿಭಾಗದಲ್ಲಿರುವ ಮಂಜೇಶ್ವರದ ಝಾನ್ಸಿ ನಗರದಲ್ಲಿ ಝಾನ್ಸಿಫ್ರೆಂಡ್ಸ್ ತಂಡ ಹಮ್ಮಿಕೊಂಡಿರುವ ನವರಾತ್ರಿ ಕಾರ್ಯಕ್ರಮದಲ್ಲಿ ರಿಲೀಸ್ ಆಗುತ್ತಿದೆ.
ಈಗಾಗಲೇ ವಿಭಿನ್ನ ರೀತಿಯಲ್ಲಿ ಅದ್ಧೂರಿಯಾಗಿ ತನ್ನ ಸಿನಿಮಾವನ್ನು ಪ್ರಚಾರ ಮಾಡುತ್ತಿದೆ ಉತ್ಸಾಹಿ ಯುವಕರ ತಂಡ. ಕನ್ನಡ ದೇಶದೊಳ್ ಎಂಬ ಶೀರ್ಷಿಕೆಯನ್ನು ಹೊಂದಿರುವ ಅಂಗಿಯನ್ನು ಸಿನಿಮಾ, ಕ್ರೀಡೆ, ಸಾಹಿತ್ಯ ಹೀಗೆ ಬೇರೆ ಬೇರೆ ಕ್ಷೇತ್ರದ ಸಾಧಕರಿಗೆ ನೀಡಿ ಅವರ ಶುಭಹಾರೈಕೆಯನ್ನು ಪಡೆಯುತ್ತಿದ್ದಾರೆ. ಆಟೋ, ಬಸ್, ಅಂಗಡಿಯ ಮುಂಗಟ್ಟು, ಬೈಕ್, ಕ್ಯಾಬ್ ಹೀಗೆ ಎಲ್ಲಾ ಕಡೆ ಸಿನಿಮಾ ಶೀರ್ಷಿಕೆ ಪ್ರಚಾರ ಮಾಡಿದೆ ಚಿತ್ರತಂಡ.
ಕನ್ನಡ ದೇಶದೊಳ್ ಎಂಬ ಶೀರ್ಷಿಕೆಯಲ್ಲೇ ಕನ್ನಡದ ಗಟ್ಟಿತನವಿದೆ, ಅಭಿಮಾನವಿದೆ…ಶೀರ್ಷಿಕೆಯೇ ಆಕರ್ಷಣೀಯವಾಗಿದ್ದು, ಜನರನ್ನು ಸೆಳೆಯುತ್ತಿದ್ದು ದೊಡ್ಡಮಟ್ಟಿನ ನಿರೀಕ್ಷೆ ಹುಟ್ಟುಹಾಕಿದೆ.
ಅವಿರಾಮ್ ಕಂಠೀರವ ಎಂಬ ನವ ನಿರ್ದೇಶಕ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಸಿನಿರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ಜೆ ಎಸ್ ಎಮ್ ಪ್ರೊಡಕ್ಷನ್ ನವರು ಸಿನಿಮಾ ನಿರ್ಮಿಸುತ್ತಿದ್ದಾರೆ.