ಬ್ಲ್ಯೂ ಫಿಲ್ಮ್ ನೋಡಿದ್ರೆ ಧಾರ್ಮಿಕ ಭಾವನೆ ಹೆಚ್ಚುತ್ತಂತೆ…!

Date:

ತೀರಾ ಮಡಿವಂತಿಕೆ, ಧಾರ್ಮಿಕ ಮನೋಭಾವ ಉಳ್ಳ ಮಂದಿ ಬ್ಲ್ಯೂ ಫಿಲ್ಮ್ ಎಂದರೆ ದೂರಲ್ಲೇ ನಮಸ್ಕಾರ ಮಾಡುತ್ತಾರೆ…. ! ಹೆಸರು ಕೇಳಿದರೂ ಮಹಾಪಾಪ ಎಂದುಕೊಳ್ಳೋ ಮಂದಿ ಇದ್ದರೂ ಆಶ್ಚರ್ಯವಿಲ್ಲ.. ಆದರೆ ಅಂಥವರ ಕುರಿತಾದ ವಿಚಿತ್ರ ಸಂಗತಿ ಸಮೀಕ್ಷೆಯೊಂದರಲ್ಲಿ ಬಯಲಾಗಿದೆ.

ಸಂಶೋಧನೆಯೊಂದರ ಪ್ರಕಾರ ನೀಲಿಚಿತ್ರ, ಬ್ಲ್ಯೂ ಫಿಲ್ಮ್ ನೋಡುವುದರಿಂದ ಧಾರ್ಮಿಕ ಮನೋಭಾವ ಹೆಚ್ಚುತ್ತಂತೆ! ಬಿಎಫ್ ಮತ್ತು ಧಾರ್ಮಿಕ ಮನೋಭಾವ ಎರಡೂ ತದ್ವಿರುದ್ಧ…! ಆದರೆ ಸಾಮಾನ್ಯವಾಗಿ ನೀಲಿ ಚಿತ್ರವನ್ನು ಒಬ್ಬಂಟಿಯಾಗಿ
ವೀಕ್ಷಿಸುತ್ತಾರೆ. ಹೀಗಾಗಿ ಕೆಲವರಿಗೆ ಅಪರಾಧಿ ಪ್ರಜ್ಞೆ ಕಾಡತೊಡಗುತ್ತದೆ. ಇದರಿಂದ ಹೊರಬರಬೇಕು ಎಂಬ ಭಾವನೆಗೆ ಬರುತ್ತಾರೆ. ಹೊರಬರುವ ಮಾರ್ಗವಾಗಿ ಧಾರ್ಮಿಕ ಆಚರಣೆ ಮೊರೆ ಹೋಗುತ್ತಾರೆ. ಧಾರ್ಮಿಕ ಮನೋಭಾವವನ್ನು ಹೆಚ್ಚು ರೂಢಿಸಿಕೊಳ್ಳುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಅಮೆರಿಕದ ಓಕ್ಲಹಾಮಾ ವಿಶ್ವವಿದ್ಯಾಲಯದ ಸಂಶೋಧಕರು ಈ ಸಮೀಕ್ಷೆ ನಡೆಸಿದ್ದಾರೆ. 6 ವರ್ಷಗಳ ಕಾಲ 1,314 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು ಆ ಪ್ರಕಾರ, ಬಿಎಫ್ ವೀಕ್ಷಣೆ ಬಳಿಕ ಅನೇಕರು ತಮಗೆ ಧಾರ್ಮಿಕತೆಯತ್ತ ಮನಸ್ಸಾಗಿದೆ ಎಂದು ಹೇಳಿದ್ದಾರೆ. ವಾರಕ್ಕೆ ಒಮ್ಮೆ ಇದನ್ನು ನೋಡುವ ಅಭ್ಯಾಸ ಇರುವವರಲ್ಲಿ ಹೆಚ್ಚಾಗಿ ಅಪರಾಧಿ ಪ್ರಜ್ಞೆ ಕಾಡಿದೆಯಂತೆ. ಎಲ್ಲರಲ್ಲೂ ಅಪರಾಧಿ ಪ್ರಜ್ಞೆ ಮೂಡಲ್ಲ.

ಕೆಲವೊಂದ್ಸಲ ಬಿಎಫ್ ನೋಡುವ ಅಭ್ಯಾಸ ಹಾಗೇ ಮುಂದುವರಿಯುವ ಸಾಧ್ಯತೆಯೂ ಇದೆ. ಆದರೆ ಧಾರ್ಮಿಕತೆಯತ್ತ ಮನಸ್ಸಾದ ಸಂಗತಿಗಳು ಹೆಚ್ಚು ಕಂಡುಬಂದಿದೆ ಎಂಬುದನ್ನು ಸಂಶೋದಕರು ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...