ತಿಥಿ ಸಿನಿಮಾ ಬರಹಗಾರ ಈರೇಗೌಡ ಮೀ ಟೂ ಸುಳಿಗೆ ಸಿಲುಕಿದ್ದಾರೆ.
ಆಗ ತಾನೇ ವಿದ್ಯಾಭ್ಯಾಸ ಮುಗಿಸಿ ಬಂದಿದ್ದ ಯುವತಿ ಬಾಳಲ್ಲಿ ಚೆಲ್ಲಾಟವಾಡಿದ್ದಾನೆ. ಬಳೆ ಕೆಂಪ ಎನ್ನುವ ಸಿನಿಮಾಗಾಗಿ ಈರೇಗೌಡ ಜತೆಗೆ ಯುವತಿಯೊಬ್ಬರು ಕೆಲಸ ಮಾಡಿದ್ದರು. ಸ್ನೇಹಿತನ ಮನೆಗೆಂದು ಕರೆದುಕೊಂಡು ರೈಟರ್ ಈರೇಗೌಡ ಚಿತ್ರ ವಿಚಿತ್ರ ಹಿಂಸೆ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಮೀಟೂ ಅಭಿಯಾನದ ಮೂಲಕ ಸಂತ್ರಸ್ತೆ ಫೇಸ್ ಬುಕ್ ನಲ್ಲಿ ವಿವರವಾಗಿ ಹೇಳಿದ್ದಾರೆ. ಈರೇಗೌಡ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಈರೇಗೌಡರ ಬಳೆಕೆಂಪ ಸಿನಿಮಾ ನವೆಂಬರ್ ಗೆ ನಡೆಯಲಿರುವ ಧರ್ಮಶಾಲಾ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಿಂದ ಔಟ್ ಆಗಿದೆ. ಅಲ್ಲದೆ ಫಿಲ್ಮ್ ಫೆಸ್ಟಿವಲ್ ಗೂ ಚಿತ್ರ ನಿರ್ದೇಶಕ ಈರೇಗೌಡಗೂ ಎಂಟ್ರಿ ಇಲ್ಲ.