ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಕುಡಿಯುವ ನೀರಿನ ಸಂರಕ್ಷಣೆ ಮುಖ್ಯ. ಮುಂದೆ ಎದುರಾಗುವ ನೀರಿನ ಅಭಾವವನ್ನು ತಪ್ಪಿಸಲು ಕೆಲವೊಂದು ರಾಷ್ಟ್ರಗಳಲ್ಲಿ ಈಗಾಗಲೇ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ.
ಸಿಂಗಾಪೂರ್ನಲ್ಲಿ ಮಾನವರ ಮೂತ್ರವನ್ನು ಕೂಡ ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತಿದೆ ಎಂದರೆ ನಂಬಲೇಬೇಕು. ಸಿಂಗಾಪೂರಿನಂತಹ ಅಭಿವೃದ್ಧಿ ಹೊಂದಿರುವ ದೇಶದಲ್ಲಿ ನೀರಿನ ಅಭಾವ ಉಂಟಾಗಿದೆ. ಈ ಕೊರತೆಯನ್ನು ನೀಗಿಸಲು ಅಲ್ಲಿನ ಸರ್ಕಾರ ಬಳಸಿದ ನೀರನ್ನು ಮರುಬಳಕೆ ಮಾಡುತ್ತಿದೆ.
ಬಾತ್ರೂಂ ನೀರು, ಅಡುಗೆ ಮನೆಯ ನೀರು ಅಲ್ಲದೆ ಟಾಯ್ಲೆಟ್ ನೀರನ್ನು ಕೂಡ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕುಡಿಯುವ ನೀರನ್ನಾಗಿ ಪರಿವರ್ತಿಸಲಾಗುತ್ತಿದೆ.
ಇತ್ತೀಚೆಗೆ ಸಿಂಗಾಪೂರ್ ನಗರದಲ್ಲಿ ಟಾಯ್ಲೆಟ್ ನೀರನ್ನು ಕುಡಿಯುವ ನೀರು ಆಗಿಸಿ ಮಾರಾಟ ಮಾಡುತ್ತಿದೆ ಎನ್ನಲಾಗಿದೆ.
ದೇಶದ ನೀರಿನ ಕೊರತೆಯನ್ನು ನೀಗಿಸಲು ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದಿರುವ ವಿಜ್ಞಾನಿಗಳು ಟಾಯ್ಲೆಟ್ ನೀರನ್ನು ಪರೀಷ್ಕರಿಸಿ ಖನಿಜಯುಕ್ತ ಕುಡಿಯುವ ನೀರಾಗಿ ಮಾಡಿದ್ದಾರೆ.
ಆದರೂ ಇದನ್ನು ಕುಡಿಯುವುದು ಹೇಗೆ ಎಂಬುದನ್ನು ಯೋಚಿಸುತ್ತೀರಿ ಅಲ್ವಾ? ಈ ನೀರಿನ ಶುದ್ಧತೆಯನ್ನು ಗಮನಿಸಿದರೆ ಇತರೆ ಎಲ್ಲಾ ನೀರಿಗಿಂತಲೂ ಪರಿಶುದ್ಧವಾಗಿರುತ್ತದೆ ಎಂದು ಸಂಶೋಧಕರು ಭರವಸೆ ನೀಡಿದ್ದಾರೆ.
ಈ ಶುದ್ಧೀಕರಿಸಿದ ನೀರನ್ನು ಮಾರುಕಟ್ಟೆಗೆ ಬಿಡುಗಡೆಗೆ ಮುನ್ನ 1 ಲಕ್ಷಕ್ಕೂ ಹೆಚ್ಚು ಬಾರಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಒಟ್ಟಿನಲ್ಲಿ ನೀರಿನ ಕೊರತೆಯ ಸಮಸ್ಯೆಯನ್ನು ಹೋಗಲಾಡಿಸಲು ಹೊಸ ತಂತ್ರಜ್ಞಾನದ ಮೂಲಕ ಸಿಂಗಾಪೂರ್ ಯಶಸ್ವಿಯಾಗಿದೆ .