ಭಾರತದಲ್ಲಿ ಅಪಘಾತದ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರಿಂದ ಲೆಕ್ಕವಿಲ್ಲದಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಒಂದು ವರದಿಯ ಪ್ರಕಾರ ಕೇವಲ 12 ವರ್ಷಗಳಲ್ಲಿ 39 ಲಕ್ಷ ಜನ ಅಪಘಾತದಿಂದ ಸಾವನ್ನಪ್ಪಿದ್ದಾರೆ..!
2004 ರಿಂದ 2015 ರ ಅವಧಿಯಲ್ಲಿ ಅಪಘಾತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಇದು. ಇದರಲ್ಲಿ 14.5 ಲಕ್ಷ ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಇನ್ನುಳಿದಂತೆ
ನೀರಿನಲ್ಲಿ ಮುಳುಗಿ 3.2 ಲಕ್ಷ, ರೈಲು ದುರಂತದಲ್ಲಿ 2.9 ಲಕ್ಷ, ಬೆಂಕಿ ಅನಾಹುತದಿಂದ 2.5 ಲಕ್ಷ ಹಾಗೂ ಮೆಟ್ಟಲಿನಿಂದ ಜಾರಿ ಬಿದ್ದು 1.4 ಲಕ್ಷ ಮಂದಿ ಮೃತಪಟ್ಟಿದ್ದಾರೆ.