1. ಸಿಎಂ ಚಾಂಡಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶಿಸಿದ ಕೇರಳ ಕೋರ್ಟ್
ಸೋಲರ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಇಂಧನ, ಸಾರಿಗೆ ಸಚಿವ ಆರ್ಯದನ್ ಮಹಮ್ಮದ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೇರಳ ತ್ರಿಶ್ಕೂರ್ ವಿಜಿಲೆನ್ಸ್ ಕೋರ್ಟ್ ಆದೇಶ ಹೊರಡಿಸಿದೆ.
ಸೋಲರ್ ಹಗರಣದ ಪ್ರಮುಖ ಆಪಾದಿತೆ ಸರಿತಾ ಎಸ್ ನಾಯರ್, ಸಿಎಂ ಉಮನ್ ಚಾಂಡಿ ಹಾಗೂ ಇಂಧನ ಸಚಿವ ಮಹಮ್ಮದ್ ಮೆಗಾ ಪವರ್ ಪ್ರಾಜೆಕ್ಟ್ಗಾಗಿ ಕ್ರಮವಾಗಿ 1 ಕೋಟಿ 90 ಲಕ್ಷ ರೂ, 40 ಲಕ್ಷರೂ ಲಂಚ ನೀಡಿರುವುದಾಗಿ ನಿನ್ನೆಯಷ್ಟೇ ಬುಧವಾರವಷ್ಟೇ ಆರೋಪಿಸಿದ್ದರು.
2. ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವೀಕೆ..?
ಅರುಣಾಚಲ ಪ್ರದೇಶದಲ್ಲಿ ಗೋಹತ್ಯೆ ಹೆಚ್ಚುತ್ತಿದೆ, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗಟ್ಟಿದೆ ಎಂಬ ಕಾರಣಕ್ಕೆ ರಾಷ್ಟ್ರಪತಿ ಆಡಳಿತ ಹೇರಲು ರಾಜ್ಯಪಾಲ ಜ್ಯೋತಿಪ್ರಸಾದ್ ರಾಜಕೋವಾ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿದ್ದಾರೆಂದು ವರದಿಯಾಗಿದೆ. ಅರುಣಾಚಲ ಪ್ರದೇಶದಲ್ಲಿ ಸಂವಿಧಾನ ಕಾರ್ಯಚಟುವಟಿಕೆ ಕುಸಿಯುತ್ತಿದೆ ಎಂದು ಉಲ್ಲೇಖಿಸಿರುವ ರಾಜ್ಯಪಾಲರು, ಗೋಹತ್ಯೆಯ ಛಾಯಚಿತ್ರಗಳನ್ನು ಲಗತ್ತಿಸುವ ಮೂಲಕ ರಾಜ್ಯದಲ್ಲಿ ತುರ್ತಾಗಿ ರಾಷ್ಟ್ರಪತಿ ಆಡಳಿತ ಹೇರುವುದನ್ನು ಸಮರ್ಥಿಸಿ ಕೊಂಡಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.
3. ಜೈಲಿನಲ್ಲೇ ಐಟಂ ಡ್ಯಾನ್ಸ್; ಪ್ರಭಾರ ಸೂಪರಿಡೆಂಟೆಂಟ್ ಸೇರಿ ಮೂವರು ಸಸ್ಪೆಂಡ್
ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನ ವಿಜಯಪುರ ಸೆಂಟ್ರಲ್ ಜೈಲಿನಲ್ಲಿ ಐಟಂ ಡ್ಯಾನ್ಸ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಪ್ರಭಾರ ಅಧೀಕ್ಷಕ (ಪ್ರಭಾರ
ಸೂಪರಿಡೆಂಟೆಂಟ್) ಸೇರಿದಂತೆ ಮೂವರನ್ನು ಸಸ್ಪೆಂಡ್ ಮಾಡಲಾಗಿದೆ.
ಪ್ರಭಾರಿ ಅಧೀಕ್ಷಕ ಅಂಬೇಕರ್, ಮುಖ್ಯ ವಾರ್ಡರ್ ಜಿಎಂ ಗುಂಡಹಳ್ಳಿ, ವಾರ್ಡರ್ ಸಂಪತ್ ಕುಮಾರ್ ಸೇರಿದಂತೆ ಮೂವರನ್ನು ಅಮಾನತು ಗೊಳಿಸಿ ಡಿಜಿಪಿ ಸತ್ಯನಾರಾಯಣ ರಾವ್ ಆದೇಶ ಹೊರಡಿಸಿದ್ದಾರೆ.
4. ಶಿಂಷಾ ನದಿಗೆ ಕೆಎಸ್ಆರ್ಟಿಸಿ ಬಸ್ ಬಿದ್ದು ಮೂವರ ಸಾವು
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಶಿವಪುರ ಹತ್ತಿರದ ಶಿಂಷಾ ನದಿಗೆ ಕೆಎಸ್ಆರ್ಟಿಸಿ ಬಸ್ ಉರುಳಿ ಬಿದ್ದಿದ್ದರಿಂದ ಮೂವರು ಮರಣವನ್ನಪ್ಪಿದ್ದಾರೆ.
ಬಸ್ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿತ್ತು, ಬಸ್ನಲ್ಲಿ 37 ಪ್ರಯಾಣಿಕರಿದ್ದರೆಂದು ತಿಳಿದು ಬಂದಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಚರಣೆ ಕೈಗೊಂಡಿದ್ದಾರೆ.
5. ದಿಲ್ಲಿ ಉಪಮುಖ್ಯಮಂತ್ರಿ ಮನೆ ಮುಂದೆಯೇ ಕಸ ಸುರಿದು ಪೌರಕಾರ್ಮಿಕರಿಂದ ಪ್ರತಿಭಟನೆ..!
ದೆಹಲಿ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿದೆ. ಪೌರಕಾರ್ಮಿಕರು ಕೆಲದಿನಗಳಿಂದ ತಮಗೆ ಸಂಬಳ ಸರಿಯಾಗಿ ಸಿಗುತ್ತಿಲ್ಲವೆಂದು ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನೆ ಜೋರಾಗುತ್ತಿದ್ದು, ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಮನೆ ಎದುರೇ ಕಸ ಸುರಿದು ಪ್ರತಿಭಟಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ತುಣುಕು ಇಲ್ಲಿದೆ.
6. ಬದುಕು ಕಟ್ಟಿಕೊಳ್ಳಲಾಗದೆ ಮತ್ತೆ ಜೈಲು ಬಾಗಿಲು ತಟ್ಟಿದ ಮಹಿಳೆ..!
ಶಿರಿನ್ ತಾಜ್ (44) ಎಂಬ ಮಹಿಳೆ 14 ವರ್ಷ ಜೈಲುವಾಸ ಅನುಭವಿಸಿ ಸನ್ನಡತೆಯ ಮೇಲೆ ಗಣರಾಜ್ಯೋತ್ಸದ ದಿನದಂದು ಬಿಡುಗಡೆಯಾಗಿದ್ದರು. ಆದರೆ ಇದೀಗ ಮತ್ತೆ ಜೈಲಿಗೆ ಸೇರಿಸಿಕೊಳ್ಳಲು ದಂಬಾಲು ಬಿದ್ದಿದ್ದಾರೆ.
ಶ್ರೀರಂಗಪಟ್ಟಣ ಮೂಲದ ಈ ಮಹಿಳೆ ಪತಿ ಹತ್ಯೆಗೆ ಸಂಬಂಧಿಸಿದಂತೆ ಜೈಲು ಸೇರಿದ್ದಳು. 14 ವರ್ಷಗಳ ನಂತರ ಮೊನ್ನೆಯಷ್ಟೇ ಬಿಡುಗಡೆಯಾಗಿದ್ದಳು.
ಬಿಡುಗಡೆಯ ಬಳಿಕ ಊರಿಗೆ ಹೋದರೆ ಅಲ್ಲಿ ಮನೆಇಲ್ಲ, ಮನೆಯವರಿಲ್ಲ, ಗುರುತಿಸುವವರಿಲ್ಲ..!ಆಕೆ ಜೈಲು ಸೇರುವಾಗ ಆಕೆಯ ಮಕ್ಕಳು ಚಿಕ್ಕವರಿದ್ದರು. ತಂದೆಯ ಸಾವಿನ ನಂತರ ತಾಯಿಯೂ ಮರಣ ಹೊಂದಿದ್ದಾಳೆಂದು ತಿಳಿದ ಮಕ್ಕಳು ಊರು ತೊರೆದಿದ್ದಾರೆ.
ಈಗ ಬಿಡುಗಡೆಯಾಗಿ ಊರಿಗೆ ಹೋದಾಗ ಯಾರೂ ಇಲ್ಲದೇ ಇರುವುದನ್ನು ತಿಳಿದ ಶಿರಿನ್ ತಾಜ್ ಬೆಳಿಗ್ಗೆಯೇ ಮೈಸೂರು ಬಸ್ಸನತ್ತಿ ಬಂದು ಅವಳಿದ್ದ ಜೈಲಿನ ಬಾಗಿಲನ್ನು ತಟ್ಟಿದ್ದಾಳೆ. ಇಲ್ಲೇ ಇರುತ್ತೇನೆಂದು ಕೇಳಿಕೊಂಡಿದ್ದಾಳೆ. ಬಳಿಕ ಜೈಲಾಧಿಕಾರಿಗಳು ಆಕೆಯನ್ನು ನಗರದ ನಿರ್ಗತಿಕ ಮಹಿಳೆಯರ ಆಶ್ರಯತಾಣವಾದ ಶಕ್ತಿದಾಮಕ್ಕೆ ಸೇರಿಸಿದ್ದಾರೆ.
7. ಒಲಂಪಿಕ್ಸ್ ಗೆ ಅರ್ಹತೆಗಿಟ್ಟಿಸಿಕೊಂಡ ಹೀನಾ ಸಿಧು
ಏಷ್ಯಾ ಒಲಂಪಿಕ್ ಶೂಟಿಂಗ್ ಅರ್ಹತಾ ಕೂಟದ ಮೊದಲ ದಿನ ಭಾರತದ ಶೂಟರ್ ಹೀನಾ ಸಿಧು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ರಿಯೋ ಒಲಂಪಿಕ್ಸ್ನಲ್ಲಿ ಸ್ಪರ್ಧಿಸುವುದಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
8. ಸರ್ಕಾರಿ ಸೌಲಭ್ಯ ಹಿಂದಿರುಗಿಸಿದ ಮುಫ್ತಿ ಕುಟುಂಬ
ಇತ್ತೀಚೆಗೆ ನಿಧನರಾದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ರ ಕುಟುಂಬ ಜಮ್ಮುವಿನಲ್ಲಿರುವ ನಿವಾಸವನ್ನು ತೆರವುಗೊಳಿಸಿದೆ, ಸರ್ಕಾರದ ಭದ್ರತೆಯನ್ನೂ ಹಿಂದಿರುಗಿಸಿದೆ.
ಮುಫ್ತಿ ಕುಟುಂಬದ ಈ ನಡೆ ಕುತೂಹಲಕ್ಕೆ ಕಾರಣವಾಗಿದೆ.
9. ದಾವಣಗೆರೆ, ಬೆಳಗಾವಿಗೆಗೆ ಸ್ಮಾರ್ಟ್ ಸಿಟಿ ಭಾಗ್ಯ..!
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯ ಮೊದಲ ಕಂತಿನಲ್ಲಿ ನಮ್ಮ ದಾವಣಗೆರೆ, ಬೆಳಗಾವಿ ನಗರಗಳು ಸೇರಿದಂತೆ ಒಟ್ಟು 20 ನಗರಗಳ ಹೆಸರನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡ 20 ನಗರಗಳಿಗೆ ಮೊದಲ ವರ್ಷ ಕೇಂದ್ರ ಸರ್ಕಾರ 200 ಕೋಟಿ ರೂ ನೆರವು ನೀಡಲಿದೆ. ನಂತರದ ಮೂರು ವರ್ಷಗಳಲ್ಲಿ ತಲಾ 100 ಕೋಟಿ ನೀಡುತ್ತದೆ.
ಪ್ರಕಟಿತ 20 ನಗರಗಳು
1: ಕೊಚ್ಚಿ
2. ಚೆನ್ನೈ
3. ಉದಯ್ಪುರ್
4. ಅಹ್ಮದ್ನಗರ್
5. ಸೊಲ್ಲಾಪುರ್
6. ಲೂಧಿಯಾನ
7. ಭೋಪಾಲ್
8. ಇಂಧೂರ್
9. ಭುವನೇಶ್ವರ
10. ನವದೆಹಲಿ
11. ಗುವಾಹಟಿ
12. ಜೈಪುರ
13. ಸೂರತ್
14. ಪುಣೆ
15. ಜಬಲ್ಪುರ್
16. ಕೊಯಂಬತ್ತೂರ್
17.ಕಾಕಿನಾಡ
18. ವಿಶಾಖಪಟ್ಟಣ
19. ದಾವಣಗೆರೆ
20. ಬೆಳಗಾವಿ
10. ಲೂಸಿಯಾ ಪವನ್ ಈಗ `ಯೂಟರ್ನ್’..!
ಲೂಸಿಯಾ ಸಿನಿಮಾ ಖ್ಯಾತಿಯ ಪವನ್ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅವರ ಹೊಸ ಚಿತ್ರಕ್ಕೆ ಯೂಟರ್ನ್ ಎಂದು ನಾಮಕರಣ ಮಾಡಿದ್ದಾರೆ. ಚಿತ್ರದ ಟ್ರೈಲರ್ ಬಿಟ್ಟಿದ್ದಾರೆ. ಇದು ನಿಮಗಾಗಿ ಇಲ್ಲಿದೆ. ಟ್ರೈಲರ್ ನೋಡಿದ್ರೆ ಥ್ರಿಲರ್, ಮಿಸ್ಟರಿ ಸ್ಟೋರಿ ಯೂಟರ್ನ್ ಒಳಗೊಂಡಿದೆ ಎಂದೆನಿಸುತ್ತದೆ.
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com