ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರ ಅಂದಾಭಿಮಾನಿಯೊಬ್ಬ ಧಮ್ಕಿ ಹಾಕಿದ್ದಾನೆ.
ಡಿಸೆಂಬರ್ 21ರಂದು ಶಾರುಖ್ ಅಭಿನಯದ ‘ಝೀರೋ’ ಸಿನಿಮಾ ರಿಲೀಸ್ ಆಗಲಿದೆ. ಇದೇ ದಿನ ಯಶ್ ನಟನೆಯ ‘ಕೆಜಿಎಫ್’ ಕೂಡ ರಿಲೀಸ್ ಆಗಲಿದ್ದು, ಇದನ್ನು ಅರಗಿಸಿಕೊಳ್ಳಲು ಶಾರುಖ್ ಅಭಿಮಾನಿಗಳಿಗೆ ಆಗುತ್ತಿಲ್ಲ.
ಝೀರೋ ಮುಂದೆ ಕೆಜಿಎಫ್ ಹೀರೋ ಆಗುತ್ತೋ ಎಂಬ ಭಯದಲ್ಲಿ ಯಶ್ ವಿರುದ್ಧ ಶಾರುಖ್ ಅಭಿಮಾನಿಗಳು ಸಿಟ್ಟಾಗಿದ್ದಾರೆ.
ಬಾಲಿವುಡ್ ಡೈರೆಕ್ಟರ್ ಫರ್ಹಾನ್ ಅಕ್ತರ್ ಯಾವಾಗಾ ಕೆಜಿಎಫ್ ರಿಲೀಸ್ ಆಗ್ತಿದೆ ಎಂದು ಟ್ವೀಟ್ ಮಾಡಿದರೋ ಅಲ್ಲಿಂದ ಶಾರುಖ್ ಅಭಿಮಾನಿಗಳಲ್ಲಿ ನಡುಕ ಹುಟ್ಟಿದೆ. ಒಬ್ಬ ಅಂದಾಭಿಮಾನಿ ಸೋ ಕಾಲ್ಡ್ ಯಶ್ , ಶಾರುಖ್ ವಿರುದ್ಧ ಬಂದ್ರೆ ನಿನ್ನ ಅಂತಿಮ ಯಾತ್ರೆ ಅಂತ ಟ್ವೀಟ್ ಮೂಲಕ ಧಮ್ಕಿ ಹಾಕಿದ್ದಾನೆ.
ಇದು ಸ್ಯಾಂಡಲ್ ವುಡ್ ಸಿನಿಮಾಗಳು, ನಟರು ಪರಭಾಷೆಯ ಸಿನಿಮಾಗಳಿಗೆ ಸೆಡ್ಡು ಹೊಡೆಯುತ್ತಿದ್ದಾರೆ. ಕನ್ನಡ ಚಿತ್ರರಂಗ ಎತ್ತರೆತ್ತರಕ್ಕೆ ಬೆಳೆಯುತ್ತಿದೆ ಎನ್ನುವುದನ್ನು ಸಾಬೀತು ಪಡಿಸುತ್ತದೆ.