ಚೀನಾ ಮಿಲಟರಿ ಭಾರತದ ರಕ್ಷಣಾ ವ್ಯವಸ್ಥೆ ಯನ್ನು ಗುರಿಯಾಗಿಟ್ಟುಕೊಂಡು ಸೈಬರ್ ದಾಳಿ ನಡೆಸಲು ತಯಾರಾಗಿದೆ ಎನ್ನುವ ಆತಂಕಕಾರಿ ಸುಳಿವು ಸಿಕ್ಕಿದೆ.
ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ ಎ) ಭಾರತದ ಮಿಲಟರಿ ಪ್ರಾಬಲ್ಯದ ಮೇಲೆ ನಿಗಾ ಇರಿಸಿ ಸೈಬರ್ ದಾಳಿ ಸಂಚು ರೂಪಿಸಿದೆ ಎಂದು ಗುಪ್ತಚರ ಸಂಸ್ಥೆಯಿಂದ ಮಾಹಿತಿ ಲಭಿಸಿದೆ.
ಈ ಸೈಬರ್ ದಾಳಿಗಾಗಿಯೇ ಪಿಎಲ್ ಎ ಮಿಲಟರಿ ಯೂನಿಟ್ 61398 ಸತತ ಪ್ರಯತ್ನ ಮಾಡುತ್ತಿದೆ ಎಂದು ಭಾರತದ ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿದೆ.
ಭಾರತದ ಸೇನಾ ನೆಲೆಗಳ ಮಾಹಿತಿಯನ್ನು ಕಲೆಹಾಕುತ್ತಿದೆ ಎಂದು ತಿಳಿದುಬಂದಿದೆ.