ದಾಖಲೆಗಳನ್ನೆಲ್ಲ ಉಡೀಸ್ ಮಾಡಲು ‘ಯಜಮಾನ‘ ದರ್ಶನ್ ರೆಡಿ..!! ಇಲ್ಲಿದೆ ದಚ್ಚು ಫ್ಯಾನ್ಸ್ ಗೆ ಹ್ಯಾಪಿ ನ್ಯೂಸ್..
ಈಗಾಗ್ಲೇ ಕೆಜಿಎಫ್ ಸಿನಿಮಾ ದಾಖಲೆಗಳ ಸರದಾರನಾಗಿ ಮಿರಮಿರ ಮಿಂಚುತ್ತಿದ್ದಾನೆ.. ಚಂದನವನದ ಕಡೆ ಭಾರತೀಯ ಚಿತ್ರರಂಗವೇ ಬೆರಗಾಗುವ ಕ್ಷಣಕ್ಕೆ ಕೆಜಿಎಫ್ ನಂತಹ ಸಿನಿಮಾವೊಂದು ಮೆಟ್ಟಿಲಾಗಿದ್ದು, ಕನ್ನಡಿಗರು ಹೆಮ್ಮೆ ಪಡಬೇಕಾದ ವಿಚಾರವೇ ಸರಿ.. ಹೀಗಾಗೆ ಮುಂದಿನ ದಿನಗಳ ನಮ್ಮ ಸಿನಿಮಾ ಕ್ವಾಲಿಟಿ ಮತ್ತಷ್ಟು ಉತ್ಕೃಷ್ಟವಾಗಿರಲಿದೆ ಅನ್ನೋದಕ್ಕೆ ಸಾಕ್ಷಿಯಾಗ್ತಿವೆ, ನಟಸಾರ್ವಭೌಮ, ಪೈಲ್ವಾನ್, ಯಜಮಾನ ಸಿನಿಮಾಗಳು…
ಇನ್ನೂ ದರ್ಶನ್ ಅವರ ಹೆಸರಿನಲ್ಲೇ ಒಂದು ಶಕ್ತಿ ಅಡಗಿದೆ.. ಅವರ ಸಿನಿಮಾಗಾಗಿ ವರ್ಷದಿಂದ ಕಾಯುತ್ತಿರುವ ಪ್ರೇಕ್ಷಕರ ಮುಂದೆ ಯಜಮಾನನಾಗಿ ಬರ್ತಿರೋದನ್ನ ನಾವಿಲ್ಲಿ ಹೇಳಬೇಕಿಲ್ಲ.. ಸದ್ಯಕ್ಕೆ ಇದೇ ಯಜಮಾನ ಈಗ ಆಗಿರುವ, ಮುಂದೆ ಆಗಿರುವ ರೆಕಾರ್ಡ್ ಗಳನ್ನೆಲ್ಲ ಬ್ರೇಕ್ ಮಾಡುವ ಮುನ್ಸೂಚನೆಯನ್ನ ನೀಡುತ್ತಿದೆ…
ಯಜಮಾನಿಗಾಗಿ 10 ಭರ್ಜರಿ ಸೆಟ್ ಗಳು..
ಹಿಂದೆ ರಿಲೀಸ್ ಆದ ಯಜಮಾನ ಸಿನಿಮಾ ಟೀಸರ್ ಚಿತ್ರದಲ್ಲಿ ದರ್ಶನ್ ಅವರ ಗತ್ತಿನ ಬಗ್ಗೆ ಸಾರಿ ಹೇಳಿತ್ತು… ಇನ್ನೂ ಸಿನಿಮಾ ಕೂಡ ಅದೇ ಲೆವೆಲ್ ಗೆ ಇರಬೇಕಲ್ಲ, ಹೀಗಾಗೆ 10 ಸೆಟ್ ಗಳನ್ನ ನಿರ್ಮಾಣ ಮಾಡಿ, ಈ ಸೆಟ್ ಗಳಲ್ಲೇ 3 ಡಿ ಶಾಟ್ ಗಳನ್ನು ತೆಗೆಯಲಾಗುತ್ತಿದೆ.. ಸಿನಿಮಾ ಸ್ಟೋರಿಗೆ ತಕ್ಕ ಲೊಕೇಷನ್ ಗಳು ಸಿಗದೆ ಇದ್ದ ಕಾರಣಕ್ಕೆ ಈ ರೀತಿ ಸೆಟ್ ಗಳಲ್ಲಿ ನಿರ್ಮಾಣ ಮಾಡಲಾಗಿದೆ ಅಂತ ಚಿತ್ರತಂಡ ಹೇಳಿಕೆ ನೀಡಿದೆ..
ಚಿತ್ರದಲ್ಲಿ ಬರುವ ದೃಶ್ಯಗಳು, ಸಾಂಗ್, ಫೈಟ್ ಎಲ್ಲವು ವಿಭಿನ್ನತೆಯಿಂದ ಕೂಡಿರಲ್ಲಿದ್ದು, ದರ್ಶನ್ ಸಿನಿಕೆರಿಯರ್ ಗೆ ದೊಡ್ಡ ಗೆಲುವನ್ನ ಕೊಡುವ ಸಿನಿಮಾ ಯಜಮಾನ ಎನ್ನಲಾಗ್ತಿದೆ.. ಈ ಮೂಲಕ ದರ್ಶನ್ ಮತ್ತೆ ತಾನೇ ಬಾಕ್ಸ್ ಆಫೀಸ್ ಸುಲ್ತಾನ್ ಅನ್ನೋದನ್ನ ಪ್ರೂವ್ ಮಾಡೋಕೆ ಹೊರಟ್ಟಿದ್ದಾರೆ..