No menu items!
10.8 C
Munich
Wednesday, April 29, 2026

ಫೇಸ್ ಬುಕ್ ನಲ್ಲಿ ದುಃಖ ತೋಡಿಕೊಂಡ ಪುಟ್ಟಗೌರಿ ರಂಜಿನಿ..!! ಕಾರಣವೇನು ಗೊತ್ತಾ..?

Must read

ಫೇಸ್ ಬುಕ್ ನಲ್ಲಿ ದುಃಖ ತೋಡಿಕೊಂಡ ಪುಟ್ಟಗೌರಿ ರಂಜಿನಿ..!! ಕಾರಣವೇನು ಗೊತ್ತಾ..?

ರಂಜಿನಿ ರಾಘವನ್.. ಈ ಹೆಸರು ಹೇಳಿದರೆ ಹೆಚ್ಚು ಜನಕ್ಕೆ ಇವರ್ಯಾರು ಅನ್ನೋ ಸಣ್ಣ ಕ್ಲೂ ಸಹ ಸಿಗೋದಿಲ್ಲ.. ಅದೇ ಪುಟ್ಟಗೌರಿ ಅಂದ್ರೆ ಸಾಕು, ಆಕೆಯ ಮುಖ ಕಣ್ಣೆದುರಿಗೆ ಬರೋದು ಕಾಮನ್.. ಹಲವರು ವರ್ಷಗಳಿಂದ ಗೌರಿಯಾಗಿ ರಂಜಿಸಿದ್ದ ರಂಜಿನಿ ಈಗ ಪುಟ್ಟಗೌರಿ ಸಿರೀಯಲ್ ನಿಂದ ಹೊರ ಬಂದಿದ್ದಾರೆ

ಕಥೆಗೆ ಅನುಗುಣವಾಗಿ ಪಾತ್ರದ ಬದಲಾವಣೆಯಾಗಿದೆ.. ಹೀಗಾಗೆ ಪುಟ್ಟಗೌರಿ ತನ್ನ ಕೊನೆ ದಿನದ ಶೂಟ್ ಅನ್ನ ಮುಗಿಸಿದಾಗಿನ ಫೋಟೊವನ್ನ ತಮ್ಮ‌ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.. ಪುಟ್ಟಗೌರಿ ಸಿರೀಯಲ್ ನಲ್ಲಿ ನನ್ನ ಕೊನೆ ದಿನದ ಶೂಟ್, ಈ ಜರ್ನಿಯಲ್ಲಿ ತುಂಬಾ ಕಲಿತಿದ್ದೇನೆ, ನಿಮ್ಮ ಪ್ರೀತಿ ಹಾಗೆ ಬೆಂಬಲಕ್ಕೆ ಧನ್ಯವಾದಳು ಅಂತ ಬರೆದಿದ್ದಾರೆ..

ಅಂದ ಹಾಗೆ ಪುಟ್ಟಗೌರಿ ಸಿರೀಯಲ್ ವೀಕ್ಷಕರಿಂದ ಹೆಚ್ಚಿನ ಮನ್ನಣೆಯನ್ನ ಪಡೆದುಕೊಂಡಿತ್ತು.. ಜೊತೆಗೆ ಟಿಆರ್ ಪಿಯಲ್ಲಿ ನಂಬರ್ 1 ಸ್ಥಾನದಲ್ಲಿತ್ತು.. ಇಡೀ ಧಾರಾವಾಹಿಯ ಗೆಲುವಿಗೆ ಪುಟ್ಟಗೌರಿಯಾಗಿ ನಟಿಸಿದ್ದ ರಂಜನಿಯ ನಟನೆಯೂ ಕಾರಣವಾಗಿತ್ತು.. ಸದ್ಯ ಚಿತ್ರರಂಗದಲ್ಲಿ ಹೆಚ್ಚೆಚ್ಚು ಆಫರ್ ಗಳು ಬರುತ್ತಿದ್ದು, ಹೀಗಾಗೆ ಈ ಸಿರೀಯಲ್ ಗೆ ಗುಡ್ಬಯ್ ಹೇಳಿದ್ದಾರೆ ಅಂತ ಹೇಳಲಾಗುತ್ತಿದೆ.. ಎನಿ ವೇ ಪುಟ್ಟಗೌರಿಯ ಮುಂದಿನ ಸಿನಿಮಾ ಜರ್ನಿ ಸಕ್ಸಸ್ ನಿಂದ ಕೂಡಿರಲಿ ಅಂತ ಹಾರೈಸಿ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article