ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರ ರಾಜೀವ್ ನಿಶ್ಚಿತಾರ್ಥ.. ಹುಡುಗಿ ಯಾರು ಗೊತ್ತಾ..?
ಸಿಸಿಎಲ್ ನಲ್ಲಿ ತನ್ನ ಬ್ಯಾಟಿಂಗ್ ನ ಮೂಲಕ ಎಲ್ಲರ ಗಮನ ಸೆಳೆದ ನಟ ರಾಜೀವ್ ಹೊಸ ಬಾಳಿನ ಹೊಸಿಲಿನಲ್ಲಿ ನಿಂತಿದ್ದಾರೆ.. ಹೌದು, ರಾಜೀವ್ ಇತ್ತೀಚೆಗಷ್ಟೇ ಬೆಂಗಳೂರು ಮೂಲದ ರೇಷ್ಮಾ ಅವರೊಂದಿಗೆ ನಿಶ್ಚಿತಾರ್ಥ ನೆರವೇಸಿಕೊಂಡಿದ್ದಾರೆ.. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರ ಪತ್ನಿ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ನಟನಟಿಯರು, ಹಾಗೆ ಸಿಸಿಎಲ್ ನಲ್ಲಿ ಕರ್ನಾಟಕವನ್ನ ಪ್ರತಿನಿಧಿಸುವ ಹಲವು ಕ್ರಿಕೆಟಿಗರು ಪಾಲ್ಗೊಂಡಿದ್ದಾರೆ…
ಸುದೀಪ್ ಅವರ ಗೆಳೆಯನಾಗಿರುವ ರಾಜೀವ್ ಗೆ ಕಿಚ್ಚ ಕೂಡ ತಮ್ಮ ಟ್ವಿಟರ್ ನಲ್ಲಿ ಶುಭಾಶಯ ಕೋರಿದ್ದಾರೆ.. ಶೂಟಿಂಗ್ ನಲ್ಲಿ ಬ್ಯೂಸಿ ಇರುವ ಕಿಚ್ಚ ಈ ಕಾರ್ಯಮಕ್ಕೆ ಬರಲು ಸಾಧ್ಯವಾಗಿಲ್ಲ.. ರಾಜೀವ್ ಕೈ ಹಿಡಿಯಲಿರುವ ರೇಷ್ಮಾ ದಯಾನಂದ ಸಾಗರ್ ಕಾಲೇಜ್ ನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ ಎನ್ನಲಾಗಿದೆ..