ಗ್ರೀನ್ ಟೀ ಕುಡಿಯೋದ್ರಿಂದ ನಿಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಗೊತ್ತಾ..?
ಕಾಫಿ, ಟೀನಂತೆ ಇಂದು ಗ್ರೀನ್ ಟೀ ಸಹ ಸಾಮಾನ್ಯವಾಗಿದ್ದು, ಇದನ್ನ ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.. ಇದಕ್ಕೆ ಕಾರಣ ಇದರಲ್ಲಿರುವ ಔಷಧೀಯ ಗುಣಗಳಲ್ಲದೆ ಮತ್ತೇನು ಅಲ್ಲ.. ಹೀಗಾಗೆ ಗ್ರೀನ್ ಟೀ ಸದ್ಯಕ್ಕೆ ಅಧಿಕ ಜನರ ಜೀವನ ಶೈಲಿಯ ಮುಖ್ಯ ಭಾಗವಾಗಿಬಿಟ್ಟಿದೆ.. ರೋಗ ನಿರೋಧಕ ಶಕ್ತಿಯನ್ನ ಹೊಂದಿರುವ ಗ್ರೀನ್ ಟೀ ವ್ಯಕ್ತಿಯ ಆರೋಗ್ಯಕ್ಕೆ ಬಹಳ ಒಳಿತು..
ಕೆಲಸದ ಒತ್ತಡ, ಬದಲಾದ ಜೀವನ ಶೈಲಿ, ಏರುಪೇರಾಗಿರುವ ಆಹಾರ ಪದ್ದತಿ ಇವೆಲ್ಲಕ್ಕೂ ಅಗತ್ಯವಿರುವ ಔಷಧಿಗಳೊಂದಿಗೆ ಗ್ರೀನ್ ಟೀ ಹೆಸರು ಕೇಳಿ ಬರುತ್ತಿದೆ.. ಡಯಟ್, ತ್ವಚೆಯ ಹಾರೈಕೆ, ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಲು ಗ್ರೀನ್ ಟೀ ರಾಮಬಾಣವಾಗಿದೆ.. ಅತೀ ಹೆಚ್ಚು ಆ್ಯಂಟಿಯಾಕ್ಸಿಂಡೆಂಟ್ , ಕಾರ್ಬೊಹೈಡ್ರೇಟ್, ಅಮಿನೊ ಆಸಿಡ್, ಲಿಪಿಡ್ ಅಂಶಗಳನ್ನ ಒಳಗೊಂಡಿರುವ ಇದು, ರಕ್ತ ಹೆಪ್ಪುಗಟ್ಟುವಿಕೆ, ಜೀರ್ಣಕ್ರಿಯೆ, ಮಾನಸಿಕ ಆರೋಗ್ಯ, ಹೃದಯದ ಸ್ವಾಸ್ಥ್ಯಕ್ಕೆ ನೆರವಾಗುತ್ತದೆ..ಅತೀಯಾದ್ರೆ ಅಮೃತವು ವಿಷವೆಂಬಂತೆ ದೇಹದ ಆರೋಗ್ಯಕ್ಕೆ ಬೇಕಾದಷ್ಟು ಮಾತ್ರ ಇದರ ಸೇವೆ ಇದ್ದರೆ ಒಳ್ಳೆಯದು.. ಇನ್ನೂ ಗ್ರೀನ್ ಟೀಯಲ್ಲಿ ನೂರಾರು ಬಗೆಗಳಿದ್ದು, ಹಲವು ಫ್ಲೇವರ್ ಗಳಲ್ಲಿ ಇದು ಲಭ್ಯವಿದೆ..