ಕಳಜಿ ಬಿತ್ತು ಕನ್ನಡ ಚಿತ್ರರಂಗದ ಕಳಸ..!!
ರೆಬಲ್ ಸ್ಟಾರ್ ಅಂಬರೀಶ್ ಅಂದ್ರೇನೆ ಇಡೀ ಭಾರತೀಯ ಚಿತ್ರರಂಗಕ್ಕೆ ಪ್ರೀತಿ.. ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಅವರ ಬಳಿಕ ಕನ್ನಡ ಸಿನಿಮಾ ರಂಗವನ್ನ ತನ್ನ ಬೆನ್ನಿನ ಮೇಲೆ ಹೊತ್ತು, ಚಿತ್ರರಂಗ ದಿಕ್ಕು ತಪ್ಪದ ಹಾಗೆ ನೋಡಿಕೊಂಡವರು ಅಂಬರೀಶ್.. ಎಲ್ಲ ಸಮಸ್ಯೆಗು ಮುಂದೆ ಬಂದು ಬಗೆಹರಿಸಿ ತಂದೆ ಸ್ಥಾನದಲ್ಲಿ ನಿಂತು ಮುನ್ನಡೆಸಿದ ಕೀರ್ತಿ ಅಂಬರೀಶ್ ಅವರದ್ದು..
ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷರಿದ್ರು, ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿದದ್ದು ಇದೇ ಕರ್ಣನ ಮುಂದೆ.. ಎಂತಹ ದೊಡ್ಡ ಸಮಸ್ಯೆಗಳಿದ್ರು ಅಂಬಿ ಅವರ ಎಂಟ್ರಿ ಆದ್ರೆ ಅದಕ್ಕೆ ತಿಲಾಂಜಲಿ.. ಬಟ್ ಈಗ ಚಿತ್ರರಂಗಕ್ಕೆ ಇದ್ದ ಒಂದೇ ಒಂದು ಮುತ್ತಿನ ಕಳಸ ಕಳಜಿದಂತಾಗಿದೆ.. ಇಡೀ ಚಿತ್ರರಂಗಕ್ಕೆ ಅನಾಥ ಭಾವನೆ ಕಾಡಲು ಶುರುವಾಗಿದೆ.. ಅಂಬಿ ಅವರಿಗೆ ಅಂಬಿಯೇ ಸಾಟಿ.. ಮತ್ತೆ ಹುಟ್ಟಿಬನ್ನಿ ಕಲಿಯುಗ ಕರ್ಣ..