ಮಂಡ್ಯದಲಲ್ಲ ಬೆಂಗಳೂರಿನಲ್ಲೇ ನಡೆಯಲಿದೆ ಅಂಬರೀಶ್ ಅವರ ಅಂತ್ಯಸಂಸ್ಕಾರ..!!
ಬೆಳಗ್ಗೆ ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ಸಕಲ ಸಿದ್ದತೆಯನ್ನ ಮಾಡಿಕೊಳ್ಳಲಾಗಿದೆ.. ಕಂಠೀರವ ಸ್ಟೇಡಿಯಂನಲ್ಲಿ ಬೆಳಗ್ಗೆ 8 ಗಂಟೆಗೆ ರೆಬಲ್ ಸ್ಟಾರ್ ಅಂಬರೀಶ್ ಅವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.. ಜೊತೆಗೆ ಮಂಡ್ಯದ ಜನತೆಗೆ ಉಚಿತ ಬಸ್ ಸೇವೆಯನ್ನ ಒದಗಿಸಲಿದ್ದು, ನಾಳೆ ಮಂಡ್ಯದ ಜನತೆ ನೇರವಾಗಿ ಕಂಠೀರಣ ಸ್ಟೇಡಿಯಂನಲ್ಲಿ ಅವರ ಅಂತಿಮ ದರ್ಶನ ಪಡೆಯ ಬಹುದು…ಆದರೆ ಇಲ್ಲಿಂದ ಅವರ ಪಾರ್ಥಿವ ಶರೀರವನ್ನು ಮಂಡ್ಯಗೆ ತೆಗೆದುಕೊಂಡು ಹೋಗಿ ಮತ್ತೆ ವಾಪಸ್ ಇಲ್ಲಿಗೆ ತರೋಕೆ ಕಷ್ಟವಾಗುತ್ತೆ ಎಂಬ ಕಾರ
ಣಕ್ಕೆ ಇಲ್ಲಿಯೇ ಅಂತಿಮ ದರ್ಶನಕ್ಕೆ ಜಾಗ ಮಾಡಿಕೊಡಲಾಗಿದೆ.. ಇನ್ನು ಅಂಬರೀಶ್ ಅವರ ಅಂತಿಮ ಸಂಸ್ಕಾರವನ್ನ ಬೆಂಗಳೂರಿನಲ್ಲೇ ನಡೆಸಲು ನಿರ್ಧಾರ ಮಾಡಿರೋದ್ರಿಂದ ಮಂಡ್ಯಗೆ ಪಾರ್ಥಿವ ಶರೀರವನ್ನ ತೆಗೆದುಕೊಂಡು ಹೋಗುವುದಿಲ್ಲ ಅಂತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ..