ಅಂದು ಸಿಪಾಯಿ ಇವತ್ತು ನಂಬರ್ 1 ಶ್ರೀಮಂತ..! ಸಾಧಿಸುವ ಛಲ, ಎಡಬಿಡದ ಪ್ರಯತ್ನ ಇದ್ರೆ ಯಾವತ್ತೂ ಸೋಲಲ್ಲ..!

Date:

ಜೀವನ ಅಂದ್ರೆ ಸಿಹಿ-ಕಹಿ ಎರಡೂ ಇದ್ದದ್ದೇ..! ಸಿಹಿ ಎಲ್ಲರಿಗೂ ಇಷ್ಟ ಆಗುತ್ತೆ.. ಇದೇ ಸ್ವೀಟ್ ಲೈಫ್ ಕೊನೆತನಕ ಇರ್ಲಪ್ಪಾ ಅಂತ ಬೇಡ್ಕೊಳ್ತೀವಿ.! ಒಂದು ವೇಳೆ ಸಿಹಿ ಲೈಫು ಕಹಿ ಆಗ್ಬಿಡ್ತು ಅಂದ್ರೆ ಅದನ್ನು ಫೇಸ್ ಮಾಡೋಕೆ ಆಗಲ್ಲ..! ಆದರೆ ಕಷ್ಟದಿಂದ ಮೇಲೆ ಬಂದೋರು, ಸುಖವನ್ನು ಆಸ್ವಾದಿಸಿದಂತೆಯೇ ಮತ್ತೆ ಕಷ್ಟ ಬಂದರೂ ಅದಕ್ಕೆ ತಲೆ ಕೆಡಿಸಿಕೊಳ್ಳಲ್ಲ..! ಯಾಕಂದ್ರೆ ಅವರಿಗ ಕಷ್ಟ ಜೀವನ ನಡೆಸೋದು ಹೆಂಗಂತ ಪ್ರಾಕ್ಟಿಕಲ್ ಆಗಿಯೇ ಹೇಳಿಕೊಟ್ಟಿರುತ್ತೆ..! ಫ್ರೆಂಡ್ಸ್ ಅಪ್ಪನೋ, ಅಜ್ಜನೋ ಮಾಡಿಟ್ಟ ಆಸ್ತಿಯನ್ನು ಕಾಪಾಡಿಕೊಂಡು, ಅವರು ಮಾಡಿಟ್ಟ ದುಡ್ಡನ್ನು ದುಪ್ಪಟ್ಟು ಮಾಡಿ ಶ್ರೀಮಂತರಾಗೋದು ಭಾರಿ ದೊಡ್ಡ ಕೆಲಸವಲ್ಲ..! ಅದೇ ಬಡತನದಲ್ಲಿ ಬೆಂದು ಮೇಲೆ ಬರೋದು ಇದೆಯಲ್ಲಾ ಅದು ದೊಡ್ಡ ಚಾಲೆಂಜ್..! ತುಂಬಾ ಜನರ ಬಗ್ಗೆ ಕೇಳಿದ್ದೇವೆ..!? ಎಂಥೆಂಥಾ ಕಷ್ಟಗಳನ್ನು ಫೇಸ್ ಮಾಡಿ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದಾರಂತ..!
ನಿಮಗೆ ವಾಂಗ್ ಜಿಯನ್ಲಿನ್ ಗೊತ್ತಾ..?! ಇಂಡಿಯಾದಲ್ಲಿ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಇದ್ದಾರಲ್ಲಾ ಅವರಂತೆಯೆ ಇವರು (ವಾಂಗ್) ಚೀನಾದ ಶ್ರೀಮಂತ..! ಚೀನಾ ಶ್ರೀಮಂತರ ಸಾಲಲ್ಲಿ ಇವರೇ ಸದ್ಯಕ್ಕೆ ನಂಬರ್ 01 ಶ್ರೀಮಂತರು..!
ಭಾರತದ ಮುಕೇಶ್ ಅಂಬಾನಿ ತನ್ನ ಅಪ್ಪ ಧೀರೂಬಾಯಿ ಅಂಭಾನಿ ಕಟ್ಟಿದ್ದ ಸಾಮಾಜ್ಯವನ್ನು ತುಂಬಾನೇ ದೊಡ್ಡದಾಗಿ ಬೆಳೆಸಿದ್ರು. ಅಪ್ಪ ಕಟ್ಟಿದ ಸಾಮಾಜ್ಯವನ್ನು ಇನ್ನೂ ಎತ್ತರಕ್ಕೆ ತಗೊಂಡು ಹೋಗೋದೆಂದ್ರೆ ಅಷ್ಟೊಂದು ಸುಲಭದ ಮಾತಲ್ಲ ಬಿಡಿ..! ಮುಕೇಶ್ ಅಂಬಾನಿ ಕೂಡ ಸಿಕ್ಕಾಪಟ್ಟೆ ಎಫರ್ಟ್ ಹಾಕಿನೇ ಸಂಸ್ಥೆಯನ್ನು ಆಕಾಶದೆತ್ತರಕ್ಕೆ ಏರಿಸಿದ್ದು..! ಆದರೆ ಚೀನಾದ ವಾಂಗ್ ಇದ್ದಾರಲ್ಲಾ ಅವರು ಇವತ್ತು ಕಟ್ಟಿರುವ ಸಾಮ್ರಾಜ್ಯಕ್ಕೆ ಯಾರೂ ಫೌಂಡೇಷನ್ ಹಾಕಿಕೊಟ್ಟಿರಲಿಲ್ಲ..! ಫೌಂಡೇಷನ್ ಹಾಕಿ, ಇಡೀ ಸಾಮಾಜ್ಯವನ್ನು ಕಟ್ಟಿ ಆಳುತ್ತಿರೋದು ಇದೇ ವಾಂಗ್..!
ವಾಂಗ್ ಹುಟ್ಟಿದ್ದು ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ..! ಅವತ್ತು 1954. ಅಕ್ಟೋಬರ್ 24. ವಾಂಗ್ ತಂದೆ ಪೀಪಲ್ಸ್ ಲಿಬರೇಷನ್ ಆರ್ಮಿಯಲ್ಲಿ ಕೆಲಸ ಮಾಡ್ತಾ ಇದ್ದವರು. ರೆಡ್ ಆರ್ಮಿ (ಇದು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಸೈನ್ಯ) 1934-35ರ ಅವಧಿಯಲ್ಲಿ ನಡೆಸಿದ್ದ ರ್ಯಾಲಿಯಲ್ಲಿ ಭಾವಹಿಸಿದ್ದ ಹಿರಿಮೆ ವಾಂಗ್ರ ಅಪ್ಪನದ್ದು..! ಅಪ್ಪನಂತೆ ಮಗ ವಾಂಗ್ ಕೂಡ ಸೇನೆಗೆ ಸೇರ್ಬೇಕಾಗುತ್ತೆ..! ಗಡಿ ಕಾಯೋ ಸಿಪಾಯಿಯಾಗಿ ವಾಂಗ್ ಕೆಲಸಕ್ಕೆ ಸೇರ್ತಾರೆ..! ಆಗಿನ್ನೂ ವಾಂಗ್ಗೆ 15 ವರ್ಷ..! ಆಗಲೆ ಕೊರೆಯುವ ಚಳಿಯಲ್ಲಿ, ಜುಮುಗಟ್ಟುವ ಮಂಜಿನಗಡ್ಡೆಯ ಮೇಲೆ ನಡೆದುಕೊಂಡು ತನಗಿಂತ ಭಾರದ ಬಂದೂಕು, ಇತರೆ ಸಾಮಾಗ್ರಿಗಗಳನ್ನು ಎತ್ಕೊಂಡು ಸೇನಾ ರ್ಯಾಲಿಲಿ 750 ಮೈಲಿ ಹೆಜ್ಜೆ ಹಾಕಿದ್ರು…! ಸಣ್ಣ ವಯಸ್ಸಿನಲ್ಲೇ ಗಡಿ ಕಾಯೋನಾಗಿ ಸೇನೆಗೆ ಸೇರಿದ್ದ ವಾಂಗ್ ಸ್ಟೆಪ್ ಬೈ ಸ್ಟೆಪ್ ಎತ್ತರಕ್ಕೆ ಬೆಳೀತಾ ಸಾಗಿದ್ರು..! ರೆಜಿಮೆಂಟಲ್ ಕಮಾಂಡರ್ ಆಗೋ ತನಕವೂ ಬೆಳೆದು ನಿಂತರು..! ಕ್ಸಿಂಗಾಂಗ್ ಜಿಲ್ಲೇಲಿ ಸುಮಾರು 16 ವರ್ಷಗಳ ಕಾಲ ಆಡಳಿತಾಧಿಕಾರಿಯಾಗಿ ಸೇವೆ ಮಾಡಿದ್ರು..! ನಂತರ ಇಷ್ಟೇ ಅಲ್ಲ..! ನಾನೇನಾದರೊಂದು ಹೊಸದನ್ನು ಮಾಡ ಬೇಕಲ್ಲ ಅಂತ ಯೋಚನೆ ಮಾಡಿದ್ರು..! ಆಗ 1988ರಲ್ಲಿ ಹುಟ್ಟು ಕೊಂಡಿದ್ದೇ ಡಲಿಯನ್ ವಾಂಡಾ ಎಂಬ ರಿಯಲ್ ಎಸ್ಟೇಟ್ ಕಂಪನಿ..!
ಇವತ್ತು ವಾಂಗ್ರ ವಾಂಡ ಗ್ರೂಪ್ ಚೀನಾದ ಅತ್ಯಂತ ದೊಡ್ಡ ರಿಯಲ್ ಎಸ್ಟೇಟ್ ಗ್ರೂಪ್ ಆಗಿದೆ..! 134 ಶಾಪಿಂಗ್ ಪ್ಲಾಜಾಗಳು, 82 ಫೈಸ್ಟಾರ್ ಹೋಟೆಲ್ ಗಳು, 213 ಸಿನಿಮಾ ಮಾಲ್ ಗಳು, 99 ಬೇರೆ ಬೇರೆ ರೀತಿಯ ಸ್ಟೋರ್ ಗಳು ವಾಂಗರದ್ದಾಗಿದೆ..! ಅಷ್ಟೇ ಅಲ್ಲದೇ ಜಗತ್ತಿನ ಅತ್ಯಂತ ದೊಡ್ಡ ಥಿಯೇಟರ್ ಎಎಂಸಿ ಥಿಯೇಟರ್ ಕೂಡ ವಾಂಗ್ ಸಾಮ್ರಾಜ್ಯಕ್ಕೇ ಸೇರಿರೋದಾಗಿದೆ..! 2012ರಲ್ಲಿ ಅಮೆರಿಕಾದ ಎಎಂಸಿ ಎಂಟರ್ಟೈನ್ಮೆಂಟ್ ಕಂಪನಿಯನ್ನು ಬರೊಬ್ಬರಿ 205 ಕೋಟಿ ಡಾಲರ್ ಕೊಟ್ಟು ಕೊಂಡು ಕೊಂಡರು ವಾಂಗ್..! ಸ್ಪೇನ್ನ ಎತ್ತರದ ಕಟ್ಟಡಗಳಲ್ಲೊಂದಾದ ಎಡಿಫಿಕಿ ಎಸ್ಟಾನಾವವನ್ನೂ ಕೂಡ ವಾಂಗರ ಡಲಿಯನ್ ವಾಂಡಾ ಸಮೂಹ ಖರೀದಿಸಿದೆ..! 10,000 ಚದರ ಮೀಟರ್ ಜಾಗದಲ್ಲಿ ಒರಿಯಂಟಲ್ ಮೂವಿ ಮೆಟ್ರೋಪಾಲಿಸ್ ಅನ್ನೋ ಸ್ಟೂಡಿಯೋವನ್ನೂ ವಾಂಗ್ ಕಟ್ಟಿದ್ದಾರೆ..! ಇದು ವಿಶ್ವದ್ಲಲೇ ಅತ್ಯಂತ ದೊಡ್ಡ ಸ್ಟೂಡಿಯೋ..! ಹೀಗೆ ತಾನೇ ಡಲಿಯನ್ ವಾಂಡಾ ಎಂಬ ರಿಯಲ್ ಎಸ್ಟೇಟ್ ಗ್ರೂಪ್ ಅನ್ನು ಕಟ್ಟಿ, ಒಂದಾದ ಮೇಲೊಂದು ಹೊಸ ಹೊಸ ಉದ್ಯಮಕ್ಕೆ ಕೈ ಯಶ ಕಂಡರು ವಾಂಗ್..! ಇವತ್ತು ಹೆಂಡತಿ ಲಿನ್ ಸಿಂಗ್ ಹಾಗೂ ಏಕೈಕ ಮಗ ವಾಂಗ್ ಸಿಕಾಂಗ್ ಜೊತೆ ಆರಾಮಾಗಿದ್ದಾರೆ..! ವರ್ಷ 61, ಆದರೂ ಸಾಧಿಸುವ ಛಲ, ಇನ್ನೂ ಎತ್ತರಕ್ಕೆ ಬೆಳೆಯುವ ಹೆಬ್ಬಯಕೆ..! ಇದು ಕಣ್ರೀ ಬತ್ತದ ಉತ್ಸಾಹ ಅಂದ್ರೆ..! ವಾಂಗ್ ಈಸ್ ಗ್ರೇಟ್. ಸದ್ಯಕ್ಕೆ ಚೀನಾದ ನಂಬರ್ 1 ಶ್ರೀಮಂತ ಈ ವಾಂಗ್. ಫೋಬ್ರ್ಸನ ಲೇಟೆಸ್ಟ್ ಪಟ್ಟಿ ಪ್ರಕಾರ ಜಗತ್ತಿನ 29 ನೇ ಶ್ರೀಮಂತ..!
ಒಬ್ಬ ಸಿಪಾಯಿ, ಉದ್ಯಮಿಯಾಗಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದಿದ್ದು ಮಾತ್ರವಲ್ಲದೇ ದೇಶದಲ್ಲಿ ನಂಬರ್ 1 ಶ್ರೀಮಂತರಾಗಿದ್ದಾರೆಂದು ಅವರ ಸಾಧನೆಯ ಹಿಂದೆ ಎಷ್ಟೊಂದು ಪರಿಶ್ರಮ ಇರಬೇಡ..!? ಸಾಧಿಸುವ ಛಲ, ಎಡಬಿಡದ ಪ್ರಯತ್ನ ಇದ್ರೆ ಯಾವತ್ತೂ ಸೋಲಲ್ಲ..! ತಡವಾದರೂ ಗೆದ್ದೇ ಗೆಲ್ಲುತ್ತೇವೆ..

  • ಶಶಿಧರ ಡಿ ಎಸ್ ದೋಣಿಹಕ್ಲು

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...