No menu items!
11.1 C
Munich
Wednesday, April 29, 2026

ಕಟ್ಟಿಗೆಯಾಗಿ ಪರಿವರ್ತನೆ ಹೊಂದುತ್ತಿದ್ದಾನೆ ಈ ಮಾನವ..! ವೈದ್ಯಕೀಯ ಲೋಕಕ್ಕೇ ಸವಾಲಾದ ಬಾಂಗ್ಲಾ ನಾಗರಿಕ..!

Must read

ಇತ್ತೀಚೆಗೆ ಕರ್ನಾಟಕದ ಒಂದು ಗ್ರಾಮದ ಓರ್ವ ಹುಡುಗಿಯ ಕಣ್ಣಲ್ಲಿ ಕಟ್ಟಿಗೆ ಚೂರುಗಳು ಬರುತ್ತಿದ್ದವು..! ಅದೂ ಕೂಡಾ ಎಷ್ಟೇ ತೆಗೆದರೂ ಕೂಡಾ ಪದೇ ಪದೇ ಬರುತ್ತಿದ್ದುದು ವೈದ್ಯಕೀಯ ಲೋಕವನ್ನೇ ಅಚ್ಚರಿಯ ಕಡಲಲ್ಲಿ ತೇಲಿಸಿತ್ತು. ಆದರೆ ಇಲ್ಲೋರ್ವ ವ್ಯಕ್ತಿ ಇದ್ದಾನೆ.. ಈತನ ದೇಹ ದಿನಗಳೆದಂತೆ ಕಟ್ಟಿಗೆಯಾಗಿ ಪರಿವರ್ತನೆ ಹೊಂದುತ್ತಿದೆ. ವಿಶೇಷವೆಂದರೆ ಆತನ ದೇಹದ ಕೆಲವು ಭಾಗಗಳು ಈಗಾಗಲೇ ಕಟ್ಟಿಗೆಯಾಗಿ ಮಾರ್ಪಟ್ಟಿವೆ..!
ಯೆಸ್.. ನಮ್ಮ ನೆರೆ ರಾಷ್ಟ್ರ ಬಾಂಗ್ಲಾದೇಶದ ಇಪ್ಪತ್ತೈದು ವರ್ಷದ ಅಬ್ದುಲ್ ಭಜನ್ ದಾರ್ ಎಂಬ ವ್ಯಕ್ತಿ ದಿನೇ ದಿನೇ ಮರವಾಗ್ತಾ ಇದ್ದಾನೆ. ಈತನ ದೇಹವನ್ನು ಗಮನಿಸಿರುವ ಜಗತ್ತಿನಾದ್ಯಂತ ವೈದ್ಯರು ಇದನ್ನು ಗುಣಪಡಿಸಲು ಹೆಣಗಾಡುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಯಾರೂ ಸಫಲರಾಗಿಲ್ಲ..! ಒಂದು ವೇಳೆ ಆತನ ದೇಹ ಕಟ್ಟಿಗೆಯಾಗಿ ಪರಿವರ್ತನೆಯಾಗುವ ಬದಲು ಜೀವವನ್ನಾದರೂ ಉಳಿಸುವ ಪ್ರಯತ್ನದಲ್ಲಿ ವೈದ್ಯರು ಮತ್ತು ವಿಜ್ಞಾನಿಗಳು ನಿರತರಾಗಿದ್ದಾರೆ.
ಈಗಾಗಲೇ ಅಬ್ದುಲ್ ಭಜನ್ ದಾರ್ ನ ಕೈ ಬೆರಳುಗಳು ಮರದ ಕೊಂಬೆಗಳಾಗಿ ಮಾರ್ಪಟ್ಟಿವೆ. ಕಾಲು ಬೆರಳುಗಳು ಕೂಡ ಮರದ ರೆಂಬೆ, ಕೊಂಬೆಗಳಾಗುತ್ತ ಬಂದಿವೆ. ಅಬ್ದುಲ್ ಕಳೆದ ಏಳು ವರ್ಷಗಳ ಹಿಂದೆ ಢಾಕಾದಲ್ಲಿ ಅಬ್ದುಲ್ ಆಟೋ ಓಡಿಸುತ್ತಿದ್ದ. ಒಂದು ದಿನ ಆತನ ಬೆರಳುಗಳು ಮರದ ಒಣಗಿದ ರೆಂಬೆಗಳು ರೂಪ ಪಡೆಯಲಾರಂಭಿಸಿದವು. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಢಾಕಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದ್ಯಾವುದರಿಂದಲೂ ಕೂಡಾ ಅಬ್ದುಲ್ ನ ರೋಗ ವಾಸಿಯಾಗಲಿಲ್ಲ. ಇಂದಿಗೂ ವಾಸಿಯಾಗಿಯೂ ಇಲ್ಲ.
ವೈದ್ಯ ಸಮಂತ್ ಲಾಲ್ ಸೇನ್ ಎಂಬುವವರು ಅಬ್ದುಲ್ ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಪ್ರಕಾರ ಒಂದು ಜಾತಿಯ ವೈರಸ್ ನಿಂದಾಗಿ ಈ ರೋಗ ಕಾಣಿಸಿಕೊಳ್ಳುತ್ತದೆಯಂತೆ. ಇದಕ್ಕೆ ಇಲ್ಲಿಯವರೆಗೆ ಔಷಧಿ ಕಂಡು ಹಿಡಿದಿಲ್ಲ. ಈ ಹಿಂದೆ ಇಂಡೋನೇಷ್ಯಾ ವ್ಯಕ್ತಿಯೊಬ್ಬ ಈ ಖಾಯಿಲೆಯಿಂದ ಬಳಲಿದ್ದನಂತೆ. ಆತನ ನಂತರ ಅಬ್ದುಲ್ ಗೆ ಮಾತ್ರ ಇಂಥಹ ರೋಗ ಬಂದಿದೆ ಎನ್ನುತ್ತಾರವರು..!
ಜಗತ್ತಿನ ಮೇಲೆ ಚಿತ್ರವಿಚಿತ್ರ ರೋಗಗಳು ಬರುತ್ತಿವೆ. ಆದರೆ ಇಡೀ ದೇಹವೇ ಕಟ್ಟಿಗೆಯಾಗುತ್ತಿರುವುದು ಅಚ್ಚರಿಯಲ್ಲೇ ಅಚ್ಚರಿ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

11ರ ಪೋರ 8 ಮಕ್ಕಳ ಪ್ರಾಣರಕ್ಷಿಸಿದ ಧೀರ..! ತನ್ನ ಪ್ರಾಣವನ್ನೇ ಒತ್ತೆಯಾಗಿಟ್ಟು ಸಹಪಾಠಿಗಳ ಪ್ರಾಣ ಉಳಿಸಿದ ಕೆಚ್ಚೆದೆಯ ಬಾಲಕ..!

ಜುಕರ್ ಬರ್ಗ್ ಯಾಕೆ ಒಂದೇ ಬಣ್ಣದ ಶರ್ಟ್ ಧರಿಸುತ್ತಾರೆ..?

ಟ್ರಾಫಿಕ್ ಪೊಲೀಸ್ ಮೇಲೆ ಯುವತಿಯಿಂದ ಹಲ್ಲೆ…! ನಾರಿ ಮುನಿದರೆ ಮಾರಿ ಅನ್ನೋದು ಇದಕ್ಕೇ ಇರಬೇಕು..?!

ಜೈಲಲ್ಲಿ ಅರಳಿದ ಪ್ರೀತಿ..! ಜೈಲು ದಾಂಪತ್ಯ ನಡೆಸಿದ ಜೋಡಿಗಳೀಗ ದೂರ ದೂರ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article