ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಂತ್ಯಸಂಸ್ಕಾರಕ್ಕೆ ಆಕ್ಷೇಪ..! ವಿವಾದ ಹೈಕೋರ್ಟ್ ಅಂಗಳಕ್ಕೆ..
ಅಂಬಿ ಅವರ ಅಂತ್ಯ ಸಂಸ್ಕಾರಕ್ಕೆ ಈಗಾಗ್ಲೇ ಕಂಠೀರವ ಸ್ಟೂಡಿಯೋದಲ್ಲಿ ಸಕಲ ಸಿದ್ದತೆಯನ್ನ ಮಾಡಿಕೊಳ್ಳಲಾಗ್ತಿದೆ.. ಅತ್ತ ಕಡೆ ಅಂಬಿ ಅವರನ್ನ ಕಳೆದುಕೊಂಡ ನೋವಿನಲ್ಲಿ ಅವರ ಅಂತಿ ದರ್ಶನ ಪಡೆಯಲು ಕಲಾ ರಸಿಕರು, ಅಂಬಿ ಅಭಿಮಾನಿಗಳು ಮಂಡ್ಯದಲ್ಲಿ ಸೇರಿದ್ದಾರೆ..
ಕರ್ನಾಟಕದ ರಾಜಕಾರಣಿ, ಕನ್ನಡಸಿನಿಮಾ ರಂಗದ ಹಿರಿಯ ಕಲಾವಿದನ ಅಂತಿಮ ವಿಧಿವಿಧಾನಗಳನ್ನು ಮಾಡಲು ಬೇಕಾದ ಮೂಲ ತಯಾರಿಯನ್ನ ಸರ್ಕಾರ ಈಗಾಗ್ಲೇ ಕೈಗೊಂಡಿದೆ.. ಆದರೆ ಈಗ ಇದೇ ವಿಚಾರವಾಗಿ ವಕೀಲ ಆರ್.ಎಲ್.ಎನ್. ಮೂರ್ತಿ ಎನ್ನುವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಲೆಗೆ ಬೆಲೆ ಕೊಡಬೇಕಾದ ಜಾಗದಲ್ಲಿ ಅಂತ್ಯ ಸಂಸ್ಕಾರ ನಡೆಸುವುದು ಸರಿಯಲ್ಲ. ಇದು ಕಾನೂನು ಉಲ್ಲಂಘನೆ ಎಂದು ಮೂರ್ತಿ ಅವರ ತಕರಾರು..
ಇದೀಗ ಇದು ಹೈಕೋರ್ಟ್ ಅಂಗಳಕ್ಕೆ ಹೋಗಿದ್ದು, ನಾಳೆ ಕನಕ ಜಯಂತಿ ಪ್ರಯುಕ್ತ ಸರ್ಕಾರಿ ರಜೆ ಇದೆ.. ಈ ನಡುವೆಯು ನಾಳೆ ಈ ಬಗ್ಗೆ ವಿಚಾರಣೆ ನಡೆಯಲ್ಲಿದ್ದು, ನಾಳೀನ ತೀರ್ಪಿನ ಮೇಲೆ ಎಲ್ಲರ ಗಮನ ಕೇಂದ್ರೀಕರಿಸಿದೆ..