ರಮ್ಯಾ ವಿರುದ್ದ ರೋಚಿಗೆದ್ದ ಅಭಿಮಾನಿಗಳು.. ಟ್ವಿಟರ್ ಗೆ ಸೀಮಿತವಾಯ್ತು ಸಂತಾಪ..!!
ರೆಬಲ್ ಸ್ಟಾರ್ ಅಂಬರೀಶ್ ಅವರು ಹಲವರಿಗೆ ಗಾಡ್ ಫಾದರ್.. ಅದರಲ್ಲು ರಮ್ಯಾ ಪಾಲಿಗೆ ಚಿತ್ರರಂಗ ಹಾಗೆ ರಾಜಕೀಯ ರಂಗದಲ್ಲಿ ಅಂಬಿ ಈಕೆಯ ಪಾಲಿಗಿದ್ರು.. ರಮ್ಯಾ ಏನೆ ತಪ್ಪು ಮಾಡಿದ್ರು ಚಿಕ್ಕ ಹುಡುಗಿ ಕ್ಷಮಿಸಿ ಬಿಡಿ ಅಂತ ಈಕೆ ಪರ ನಿಲ್ಲುತ್ತಿದ್ರು.. ಆದರೆ ಇಂದು ಅಂಬರೀಶ್ ಅವರು ನಮ್ಮೊಂದಿಗಿಲ್ಲ.. ದೇಶ – ವಿದೇಶದಿಂದ ಅವರನ್ನ ನೋಡಲು ಜನ ಸಾಗರ ಬರುತ್ತಿದೆ.. ಆದರೆ ರಮ್ಯಾ ಮಾತ್ರ ಪತ್ತೆ ಇಲ್ಲ..
ಇನ್ನು ತಮ್ಮ ಟ್ವಿಟರ್ ಅಕೌಂಟ್ ಅಂಬಿ ಅವರ ಸಾವಿಗೆ ಸಂತಾಪ ಸೂಚಿಸಿದ್ದು ಬಿಟ್ರೆ, ಮತ್ತೆಲ್ಲು ರಮ್ಯಾ ಕಾಣಿಸಿಕೊಂಡಿಲ್ಲ.. ಅಂಬಿ ಅವರ ಮನೆಯಲ್ಲಿ ಪಾರ್ಥಿವ ಶರೀರವಿದ್ದಾಗಲು ಆಕೆ ಬರಲಿಲ್ಲ, ಕಂಠೀರವ ಸ್ಟೇಡಿಯಂ ನಲ್ಲು ಕಾಣಿಸಿಕೊಳ್ಳಲಿಲ್ಲ.. ಮಂಡ್ಯದಲ್ಲು ಪತ್ತೆ ಇಲ್ಲ.. ಹೀಗಾಗೆ ಜನತೆ ಈಕೆಯ ವಿರೋದ್ಧ ಆಕ್ರೋಶ ವ್ಯಕ್ತ ಪಡೆಸಿದ್ದಾರೆ..
ಮಂಡ್ಯದ ಹೆಣ್ಣು ಮಗಳಾಗಿ ಅಂಬಿ ಅವರನ್ನ ಸಹಾಯ ಪಡೆದು ಬೆಳೆದ ಹುಡುಗಿ ಇಂದು ಅವರನ್ನ ನೋಡೋಕೆ ಬರದಿರೋದು ಆಕ್ರೋಶಕ್ಕೆ ಕಾರಣವಾಗಿದೆ..