ಮಂಡ್ಯದಲ್ಲಿ ಅಂಬಿ ಅಂತಿಮ ದರ್ಶನ ಪಡೆದು ಬಂದು ಸಾವಿಗೆ ಶರಣಾದ ಅಭಿಮಾನಿ..!!
ಮಾಜಿ ಸಚಿವ, ರೆಬಲೆ ಸ್ಟಾರ್ ಅಂಬರೀಶ್ ನಿಧನಕ್ಕೆ ಮನನೊಂದು ಮತ್ತೋರ್ವ ಅಭಿಮಾನಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯದಲ್ಲಿ ನಡೆದಿದೆ. ಅಂಬಿ ಸಾವಿನ ಸುದ್ದಿ ಕೇಳಿ ನೆನ್ನೆ ಎಳೆನೀರು ಮಾರಾಟ ಮಾಡುತ್ತಿದ್ದ ಅಂಬಿ ಅಭಿಮಾನಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಮಂಡ್ಯದ ಸರ್ ಎಂ ವಿಶ್ವೇಶ್ವರಯ್ಯ ಮೈದಾನದಲ್ಲಿ ತನ್ನ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದುಕೊಂಡು ಬಂದಿದ್ದ ಸುರೇಂದ್ರ ಜಿ.ಎಸ್. ಮನನೊಂದು ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಇನ್ನು ಮೃತ ಸುರೇಂಧ್ರ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೊರವನ ಹಳ್ಳಿ ಗ್ರಾಮದವನು ಎನ್ನಲಾಗಿದೆ. ನೆನ್ನೆ ರಾತ್ರಿಯಷ್ಟೇ ಅಂಬರೀಶ್ ಪಾರ್ಥಿವ ಶರೀರ ದರ್ಶನ ಮಾಡಿಕೊಂಡು ಬಂದಿದ್ದ ಸುರೇಂಧ್ರ ಇಂದು ಮದ್ದೂರಿನ ಬಾಡಿಗೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.
ಹಲವು ವರ್ಷಗಳಿಂದಲೇ ಅಂಬಿಯ ಅಭಿಮಾನಿಯಾಗಿರೋ ಸುರೇಂಧ್ರ ಅಂಬಿ ಸಿನಿಮಾವನ್ನ ಎಂದೂ ಕೂಡ ಮಿಸ್ ಮಾಡ್ತಿರ್ಲಿಲ್ಲವಂತೆ. ಅಂಬಿ ಮೇಲಿನ ಹುಚ್ಚು ಅಭಿಮಾನಕ್ಕೆ ಕೈಗೆ ಅಂಬಿ ಹೆಸ್ರನ್ನ ಹಚ್ಚೆ ಹಾಕಿಸಿಕೊಂಡಿದ್ದರಂತೆ. ಈಗ ನೆಚ್ಚಿನ ನಾಯಕನ ಅಗಲಿಕೆಗೆ ಮನನೊಂದು ಅಭಿಮಾನಿ ಆತ್ಮಹತ್ಯೆ ಮಾಟಿಕೊಂಡಿದ್ದಾರೆ. ಇನ್ನು ನೇಣಿಗೆ ಶರಣಾದ ಸುರೇಂಧ್ರರ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ