ಬಾಲಿವುಡ್ ದಂತಕತೆ ಅತಿ ಲೋಕ ಸುಂದರಿ ಮತ್ತೆ ಬೆಳ್ಳಿತೆರೆ ಮೇಲೆ..!!
ಶ್ರೀದೇವಿ.. ಅತಿ ಲೋಕಸುಂದರಿ ಅಂತಲೇ ಹೆಸರು ಮಾಡಿದ್ದ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟಿ.. ಅಕಾಲಿಕ ಸಾವಿಗೆ ತುತ್ತಾದ ಈ ಹಿರಿಯ ನಟಿ ಈಗ ನೆನಪು ಮಾತ್ರ.. ಆದರೆ ಈಗ ಶ್ರೀದೇವಿ ಅವರು ಮತ್ತೆ ಬೆಳ್ಳಿ ಪರದೆಯ ಮೇಲೆ ರಾರಾಜಿಸಲ್ಲಿದ್ದಾರೆ.. ಹೌದು ಅದು ಮುಂದೆ ರಿಲೀಸ್ ಆಗಲಿರುವ ಶಾರುಕ್ ಅಭಿನಯದ ಜೀರೊ ಸಿನಿಮಾದಲ್ಲಿ..
ಹೌದು ಜೀರೊ ಸಿನಿಮಾದ ಪಾರ್ಟಿಯೊಂದು ನಡೆಯುವ ಸಂದರ್ಭದಲ್ಲಿ ಶ್ರೀದೇವಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರಂತೆ.. ಇವರಷ್ಟೆ ಅಲ್ಲ ಕರಿಷ್ಮಾ ಕಪೂರ್ ಮತ್ತು ಆಲಿಯಾ ಭಟ್ ಸಹ ಈ ಹಾಡಿನಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.. ಇದು ಅಭಿಮಾನಿಗಳಿಗೆ ಶಾರುಕ್ ನೀಡುತ್ತಿರುವ ಟ್ರೀಟ್ ಅಂತೆ.. ಡಿಸಂಬರ್ 21 ಕ್ಕೆ ಜೀರೊ ತೆರೆಗೆ ಬರಲಿದ್ದು, ಕೆಜಿಎಫ್ ಸಿನಿಮಾ ಸಹ ಇದೇ ದಿನ ಬಿಡುಗಡೆಗೊಳ್ಳುತ್ತಿದೆ..