ತನ್ನ ಪತ್ನಿಯ ನಂಬರ್ ಅನ್ನ ಅಂಬಿ ತಮ್ಮ ಮೊಬೈಲ್ ನಲ್ಲಿ ಏನಂತ ಸೇವ್ ಮಾಡಿಕೊಂಡಿದ್ರು ಗೊತ್ತಾ..?
ರೆಬಲ್ ಸ್ಟಾರ್ ಅಂಬರೀಶ್ ಹಾಗೆ ಸುಮಲತಾ ಅಂಬರೀಶ್ ಅವರದ್ದು, ಮಾದರಿ ದಾಪಂತ್ಯ ಜೀವನಕ್ಕೆ ಹಿಡಿದ ಕೈಗನ್ನಡಿ.. ಕನ್ನಡ ಸಿನಿಮಾರಂಗಕ್ಕೆ ಈ ಇಬ್ಬರ ಕೊಡುಗೆಯು ಅಪಾರವಾಗಿದೆ.. ಗಂಡನ ಮನೆ ಸೇರಿದ ಮೇಲೆ ಸುಮಲತಾ ಅಂಬರೀಶ್ ಅವರು ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ.. ತಮ್ಮ ಕೌಟುಂಬಿಕ ಜೀವನದಲ್ಲೆ ಬ್ಯೂಸಿಯಾಗಿ ಬಿಟ್ರು..
ಇನ್ನು ಅಂಬರೀಶ್ ಅವರ ಪಾಲಿಗೆ ತನ್ನ ಪತ್ನಿ ದೇವರಿದ್ದಂತೆ.. ಯಾಕಂದ್ರೆ ಅಂಬಿ ಅವರ ಬಾಳಲ್ಲಿ ಸುಮಲತಾ ಅವರು ಬಂದಮೇಲೆಯೇ ರೆಬಲ್ ಸ್ಟಾರ್ ನಟನೆಯ ಹಲವು ಸಿನಿಮಾಗಳು ಹಿಟ್ ಆಗಿದ್ದು, ರಾಜಕೀಯವಾಗಿ ನೆಲೆಕಂಡುಕೊಂಡ್ರು.. ಹೀಗಾಗೆ ತನ್ನ ಮುದ್ದಿನ ಮಡದಿಯ ಹೆಸರನ್ನ ತಮ್ಮ ಮೊಬೈಲ್ ನಲ್ಲಿ ‘Goddess’ ಅಂತ ಸೇವ್ ಮಾಡಿಕೊಂಡಿದ್ರಂತೆ ಅಂಬಿ.. ಏನೇ ಕೆಲಸವಿರ್ಲಿ, ಎಷ್ಟೇ ಬ್ಯೂಸಿ ಇರಲಿ, ತನ್ನ ಪತ್ನಿಯ ಫೋನ್ ಅನ್ನ ರಿಸೀವ್ ಮಾಡದೆ ಬಿಡುತ್ತಿರಲಿಲ್ವಂತೆ..