ಈ ಒಂದು ಆಪ್ ಬಳಸಿದ್ರೆ ನಿಮ್ಮ ಕಳೆದುಕೊಂಡ ಮೊಬೈಲ್ ಮತ್ತೆ ನಿಮ್ಮ ಕೈ ಸೇರಲಿದೆ..!!
ಅತೀ ಹೆಚ್ಚು ಮೊತ್ತವನ್ನ ಕೊಟ್ಟು, ದುಬಾರಿ ಮೊಬೈಲ್ ಫೋನ್ ಗಳನ್ನ ಖರೀದಿಸುತ್ತಾರೆ.. ಆದರೆ ಅದನ್ನ ಜೋಪಾನ ಮಾಡುವಲ್ಲಿ ಮೊಬೈಲ್ ಬಳಕೆದಾರರು ನಿರ್ಲಕ್ಷ ವಹಿಸುತ್ತಾರೆ.. ಹೀಗಾಗೆ ಬೆಲೆಬಾಳುವ ಮೊಬೈಲ್ ಗಳನ್ನ ಕಳೆದುಕೊಂಡ ಪ್ರಕರಣಗಳು ಹೆಚ್ಚಾಗುತ್ತಿವೆ.. ಇನ್ನೂ ಮುಂದೆ ನೀವು ಫೋನ್ ಕಳೆದುಕೊಂಡ್ರೆ ಈ ಆಪ್ ನ ಮೂಲಕ ಅದರ ಬಗ್ಗೆ ಮಾಹಿತಿ ನೀಡಬಹುದು..
‘ಇ ಲಾಸ್ಟ್ ಅಂಡ್ ಫೌಂಡ್‘ ಇದು ಕರ್ನಾಟಕ ಪೊಲೀಸ್ ಇಲಾಖೆ ಇಂತಹದೊಂದು ಆಪ್ ಮತ್ತು ವೈಬ್ ಸೈಟ್ ಅನ್ನ ರಚಿಸಿದೆ.. ಇಲ್ಲಿ ನೀವು ಕಳೆದು ಹೋದ ಮೊಬೈಲ್ ಬಗ್ಗೆ ಮಾಹಿತಿಯನ್ನ ಅಪ್ ಲೋಡ್ ಮಾಡಬೇಕು.. ಕೇವಲ ಮೊಬೈಲ್ ಮಾತ್ರವಲ್ಲ ಲ್ಯಾಪ್ ಟಾಪ್, ಎಜ್ಯುಕೇಷನ್ ಸರ್ಟಿಫಿಕೇಟ್, ಪಾಸ್ ಪೋರ್ಟ್ ಬಗ್ಗೆ ದೂರು ನೀಡಬಹುದು.. ನಿಮ್ಮ ದೂರಿಗೆ ಸ್ವೀಕೃತಿ ಸಿಗುತ್ತೆ.. ಈ ದೂರಗಳು ಎಸ್.ಬಿ.ಆರ್.ಬಿ ನಲ್ಲಿ ದಾಖಲಾಗುತ್ತೆ.. ಆದರೆ, ದಾಖಲಾದ ವರದಿಯ ಮೇಲೆ ಯಾವುದೇ ವಿಚಾರಣೆ ತನಿಖೆ ಕೈಗೊಳ್ಳುವುದಿಲ್ಲ..
ಹೀಗೆ ನೀವು ಕಳೆದುಕೊಂಡ ವಸ್ತುಗಳು ನಂತರದ ದಿನಗಳಲ್ಲಿ ಪೊಲೀಸ್ ಅವರಿಗೆ ಸಿಕ್ಕರೆ ಅದನ್ನ ಸಂಬಂದಪಟ್ಟವರಿಗೆ ತಿಳಿಸಿ, ಸೂಕ್ತ ದಾಖಲೆಗಳನ್ನ ಪರಿಶೀಲಿಸಿ ವಾಪಸ್ ನೀಡಲಾಗುತ್ತೆ.. ಇಲ್ಲಿ ಕೇವಲ ಕಳೆದುಕೊಂಡ ಮೊಬೈಲ್ ಅಥವ ಮೇಲೆ ತಿಳಿಸಿದ ವಸ್ತುಗಳ ಬಗ್ಗೆ ರಿಪೋರ್ಟ್ ಮಾಡಬಹುದು.. ಆದರೆ ಹೆದರಿಸಿ ಅಥವಾ ಕಳ್ಳತನ ಮಾಡಿದ್ರೆ, ಕಂಪ್ಲೇಟ್ ಅನ್ನ ಠಾಣೆಯಲ್ಲಿಯೇ ದಾಖಲಿಸಬೇಕು..