ಅಂಬರೀಶ್ ನಿಧನರಾದ ಸುದ್ದಿ ಕನ್ನಡದ ಈ ಖ್ಯಾತ ನಟಿಗೆ ಗೊತ್ತೆ ಇರಲಿಲ್ಲವಂತೆ..!! 

Date:

ರೆಬಲ್ ಸ್ಟಾರ್ ಅಂಬರೀಶ್ ನಿಧನರಾಗಿ ಇಂದಿಗೆ 6 ದಿನಗಳು ಕಳೆದಿದೆ. ಅಂಬಿ ನಿಧನಕ್ಕೆ ಕರ್ನಾಟಕ ಮಾತ್ರವಲ್ಲ ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಅನೇಕ ದಿಗ್ಗಜರು‌‌ ಅಂಬರೀಶ್ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅಲ್ಲದೆ ಲಕ್ಷಾಂತರ ಅಭಿಮಾನಿಗಳಿಗೆ ಅಂಬರೀಶ್ ಅವರನ್ನು ಕಳೆದುಕೊಂಡ ದುಖಃ ಇನ್ನೂ ಮಾಸಿಯೇ ಇಲ್ಲ. ಇಂತಹ ಸಮಯದಲ್ಲಿ ಕನ್ನಡದ ಈ ನಟಿಗೆ ಅಂಬರೀಶ್ ನಿಧನದ ಸುದ್ದಿಯೇ ತಿಳಿದಿದೆ ಇರಲಿಲ್ವಂತೆ..ಹೌದು, ರೆಬಲ್ ಸ್ಟಾರ್ ಅಂಬರೀಶ್ ದಿವಂಗತರಾದ ವಿಷಯ ತಿಳಿದಿದ್ದು ಇವತ್ತೇ ಅಂತೆ ನಟಿ ಹರ್ಷಿಕಾ ಪೂಣಚ್ಚ ಅವರಿಗೆ.. ಹೀಗಂತ ನಾವು ಹೇಳುತ್ತಿಲ್ಲ ಸ್ವತಃ ಹರ್ಷಿಕಾ ಅವರೇ ಹೇಳಿಕೊಂಡಿದ್ದಾರೆ. ಹಿರಿಯ ನಟ ಅಂಬರೀಶ್ ನಿಧನದ ಬಗ್ಗೆ ಹರ್ಷಿಕಾ ಪೂಣಚ್ಚ ಇಂದು ಟ್ವೀಟ್ ಮಾಡಿದ್ದಾರೆ. ಟ್ವಿಟ್ ಈ ರೀತಿ ಇದೆ.ಇಂದು ನನಗೆ ಅತ್ಯಂತ ದುಃಖದ ದಿನ. ನವೆಂಬರ್ 23ರಂದು ನಾನು ಶೂಟಿಂಗ್ನಲ್ಲಿದ್ದೆ, ನೆಟ್ವರ್ಕ್ ಇಲ್ಲದ ಜಾಗದಲ್ಲಿ ಇದ್ದೆವು.. ಹೀಗಾಗಿ ನನಗೆ ಅಂಬರೀಶ್ ಅವರ ನಿಧನದ ವಿಷಯ ಈಗ ತಿಳಿಯಿತು. ನಾನು ತುಂಬ ದುರಾದೃಷ್ಟವಂತೆ, ಕೊನೆಯದಾಗಿ ಅಂಬಿ ಅಂಕಲ್ ಅವರನ್ನು ನೋಡುವ ಅವಕಾಶವೂ ಸಿಕ್ಕಿಲ್ಲ ಎಂದು ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...