ಸಮುದ್ರದಾಳದಲ್ಲೇ ಓಡಾಡುತ್ತೆ ಮುಂಬೈ To ದುಬೈ ಟ್ರೈನ್..!!

Date:

ಸಮುದ್ರದಾಳದಲ್ಲೇ ಓಡಾಡುತ್ತೆ ಮುಂಬೈ To ದುಬೈ ಟ್ರೈನ್..!!

ಭಾರತ ಆಧುನಿಕತೆಯೊಂದಿಗೆ ವಿಶ್ವದ ಅತ್ಯಾಧುನಿಕ ತಂತ್ರಜ್ಞಾನವನ್ನ ಬಳಸಿಕೊಂಡು ಬೆಳೆಯುತ್ತಿದೆ.. ಹೀಗಾಗೆ ಬುಲೆಟ್ ಟ್ರೈನ್ ನಿಂದ ಹಿಡಿದು ಹಲವು ಮಾದರಿಯ ಯೋಜನೆಗಳಿಗೆ ರಾಷ್ಟ್ರ ಮುಂದಾಗುತ್ತಿದೆ.. ಈ ನಡುವೆ ಮುಂಬೈನಿಂದ ದುಬೈಗೆ ರೈಲು ಮಾರ್ಗಕ್ಕೆ ಯೋಜನೆಯೊಂದು ಸಿದ್ದವಾಗ್ತಿದೆ.. ಹೌದು, ಅದು ಸಹ ಜಲಗರ್ಭದಲ್ಲಿ ರೈಲ್ವೆ ಹಳಿಗಳ ನಿರ್ಮಾಣಕ್ಕೆ, ಸಾಗರದಲ್ಲೇ ಸುರಂಗ ಮಾಡುವ ಪ್ಲಾನ್ ಸಿದ್ದವಾಗ್ತಿದೆ..

ಈಗಾಗ್ಲೇ ದುಬೈನಿಂದ ತೈಲವನ್ನ ಆಮದು ಮಾಡಿಕೊಳ್ಳಲು ಪೈಪ್ ಲೈನ್ ಯೋಜನೆಯನ್ನ ಆಲೋಚಿಸಿರುವ ಈ ಎರಡು ರಾಷ್ಟ್ರಗಳು ಇದರ ಬೆನ್ನಲ್ಲೇ ಫ್ಲೋಟಿಂಗ್ ಟ್ರೈನ್ ಯೋಜನೆಯ‌ ಬಗ್ಗೆ ಯೋಚಿಸುತ್ತಿದ್ದಾರಂತೆ.. ಯುಎಇಯ ನ್ಯಾಷನಲ್ ಅಡ್ವೆಸರ್ ಬ್ಯೂರೋ ಸಂಸ್ಥೆ ಈ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದ್ದು, ಯುಎಇನ ಫುಜೈರಾದಿಂದ ಭಾರತದ ಮುಂಬೈಗೆ ಸಾಗರಾಳದಲ್ಲಿ ರೈಲು ಜಾಲ ನಿರ್ಮಾಣ ಮಾಡುವ ಗುರಿ ಹೊಂದಿದೆ. ಸದ್ಯ ಇದೊಂದು ಕೇವಲ ಪರಿಕಲ್ಪನೆಯಾಗಿದ್ದು, ಭಾರತದ ವಾಣಿಜ್ಯ ನಗರಿ ಮುಂಬೈದಿಂದ ಫುಜೈರಾಗೆ ಅಲ್ಟ್ರಾ-ವೇಗದ ತೇಲುವ ರೈಲು ಸಂಚಾರ ಸಾಧ್ಯತೆಯನ್ನು ಪರಿಗಣಿಸುತ್ತಿದ್ದೇವೆ ಎಂದು ಹೇಳಿದೆ..

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...