ರಾಕಿಂಗ್ ಸ್ಟಾರ್ ಯಶ್ ದಂಪತಿಗೆ ಇಂದು ಮರೆಯಲಾಗದ ದಿನವಾಗಿ ಬದಲಾಗಿದೆ.. ಕಾರಣ ಇಂದು ಬೆಳಗ್ಗೆ 6.10ರ ಸುಮಾರಿಗೆ ರಾಧಿಕ ಪಂಡಿತ್ ಹೆಣ್ಣುಮಗುವಿಗೆ ಜನ್ಮನೀಡಿದ್ದಾರೆ.. ಈ ಮೂಲಕ ರಾಕಿಂಗ್ ಸ್ಟಾರ್ ಯಶ್ ಗೆ ಮತ್ತೆ ಡಿಸಂಬರ್ ಲಕ್ಕಿ ಮಂಥ್ ಅನ್ನೋದು ಪ್ರೂವ್ ಆಗಿದೆ..ತಾಯಿ–ಮಗು ಆರೋಗ್ಯವಾಗಿದ್ದು ಯಶ್ ಹಾಗೆ ರಾಧಿಕ ಬಾಳಿಗೆ ಹೊಸ ಅತಿಥಿಯ ಆಗಮನ ಇವರ ಅಭಿಮಾನಿಗಳ ಮೊಗದಲ್ಲು ಸಂತಸವನ್ನ ಹೆಚ್ಚು ಮಾಡಿದೆ.. ಈ ಹಿಂದೆ ರಾಧಿಕ ಪಂಡಿತ್ ತಮಗೆ ಗಂಡುಮಗು ಬೇಕೆಂದು, ಯಶ್ ಹೆಣ್ಣು ಮಗು ಬೇಕೆಂದು ಹೇಳಿಕೊಂಡಿದ್ರು.. ಸದ್ಯ ಯಶ್ ಆಸೆಯಂತೆ ಹೆಣ್ಣುಮಗು ಜನನವಾಗಿದೆ..