ಶಿವಣ್ಣನ ವೃತ್ತಿ ಬದುಕಿನಲ್ಲೆ ಹೊಸ ಸಾಹಸ..!! ರುಸ್ತುಂ ಮೂಲಕ ಬರೆಯುತ್ತಿದ್ದಾರೆ ದಾಖಲೆ..!
ಸದ್ಯಕ್ಕೆ ಕನ್ನಡ ಸಿನಿಮಾಗಳ ಮೇಕಿಂಗ್ ರೇಂಜ್ ಮತ್ತೊಂದು ಹಂತ ಎತ್ತರಕ್ಕೆ ತಲುಪಿದೆ ಎನ್ನ ಬಹುದು.. ಯಾಕಂದ್ರೆ ನಮ್ಮ ಚಿತ್ರಗಳು ಈಗ ನೇರಾನೇರ ಪಕ್ಕದ ಚಿತ್ರಗಳೊಂದಿಗೆ ಮಾತ್ರವಲ್ಲದೆ ಬಾಲಿವುಡ್ ಮಂದಿಗೆ ಸವಾಲ್ ಒಡ್ಡಲು ರೆಡಿಯಾಗಿದೆ.. ಈಗ ಇದೇ ಸಾಲಿಗೆ ಶಿವಣ್ಣ ಅಭಿನಯದ ರಸ್ತುಂ ಸಿನಿಮಾ ಸೇರಿಕೊಳ್ಳಲಿದೆ..
ಹೌದು ಶಿವಣ್ಣ ವೃತ್ತಿ ಬದುಕಿನಲ್ಲೇ ಅತೀ ಹೆಚ್ಚು ಖರ್ಚು ಮಾಡಿ ಫೈಟ್ ಅನ್ನ ಕಂಪೋಸ್ ಮಾಡಲಾಗ್ತಿದೆ.. ಸ್ಟೆಂಟ್ ಮಾಸ್ಟರ್ ರವಿವರ್ಮ ಈ ಫೈಟ್ ಗಳನ್ನ ಕಂಪೋಸ್ ಮಾಡುತ್ತಿದ್ದಾರೆ.. ಇದಕ್ಕಾಗಿ ಕೋಟಿಗಳಲ್ಲಿ ಹಣವನ್ನ ವ್ಯಯಿಸಲಾಗುತ್ತಿದೆಯಂತೆ.. ಇದರ ಶೂಟಿಂಗ್ ಬಿಹಾರದಲ್ಲಿ ನಡೆಯಲಿದ್ದು, ವಿವೇಕ್ ಓಬೇರಾಯ್, ಗಣೇಶ್ ಯಾದವ್ ಸೇರಿದಂತೆ 25 ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲ್ಲಿದ್ದಾರೆ..
ಜಯಣ್ಣ ಕಂಬೈನ್ಸ್ ನಡಿ ನಿರ್ಮಾಣವಾಗುತ್ತಿರುವ ರುಸ್ತುಂನಲ್ಲಿ ಶ್ರದ್ಧಾ ಶ್ರೀನಾಥ್, ಮಯೂರಿ ಸೇರಿದಂತೆ ರಚಿತಾ ರಾಮ್ ಕೂಡ ಅಭಿನಯಸಿದ್ದಾರೆ.. ಅನೂಪ್ ಸೀಳಿನ್ ಮ್ಯೂಸಿಕ್ ನೀಡಿರುವ ಈ ಚಿತ್ರ 2019ರಲ್ಲಿ ತೆರೆಗೆ ಬರಲಿದೆ..