ಹರಿಪ್ರಿಯಾಗೆ ‘ಎಲ್ಲಿದ್ದೆ ಇಲ್ಲಿ ತನಕ’ ಅಂತಾವ್ರೆ ಸೃಜನ್ ಲೋಕೇಶ್..!!
ಸೃಜನ್ ಲೋಕೇಶ್ ಗೆ ಬಿಗ್ ಸ್ಕ್ರೀನ್ ಹೇಳಿಕೊಳ್ಳುವಂತಹ ಗೆಲುವನ್ನ ನೀಡದಿದ್ರು, ಸ್ಮಾಲ್ ಸ್ಕ್ರೀನ್ ಆಡಿಯನ್ಸ್ ಸೃಜಾನ ಮಜಾಕ್ಕೆ ಟಿವಿ ಜೈ ಎನ್ನುತ್ತಿದ್ದಾರೆ.. ಹೀಗಾಗೆ ಸೃಜನ್ ಲೋಕೇಶ್ ತಮ್ಮದೆ ಪ್ರೊಡೆಕ್ಷನ್ ಹೌಸ್ ಮೂಲಕ ಖಾಸಗಿ ವಾಹಿನಿಯಲ್ಲಿ ಮಜಾ ಟಾಕೀಸ್ ಷೋನ ನಡೆಸಿಕೊಡ್ತಿದ್ದಾರೆ.. ಈ ಷೋಗೆ ಎಲ್ಲೆಡೆಯಿಂದಲು ಮೆಚ್ಚುಗೆ ವ್ಯಕ್ತವಾಗಿದ್ದು ಸೃಜಾಗೆ ಹೆಸರನ್ನ ತಂದು ಕೊಟ್ಟಿದೆ..
ಈ ನಡುವೆ ಮತ್ತೆ ಸೃಜಾ ನಾಯಕನಾಗಿ ತಮ್ಮ ಲಕ್ಕನ್ನ ಪರೀಕ್ಷಿಸಿಕೊಳ್ಳಲು ಮುಂದಾಗಿದ್ದಾರೆ.. ಅದು ‘ಎಲ್ಲಿದ್ದೆ ಇಲ್ಲಿ ತನಕ’ ಎನ್ನುವ ಹೊಸ ಸಿನಿಮಾದ ಮೂಲಕ.. ಹೌದು, ಈ ಸಿನಿಮಾವನ್ನ ನಿರ್ದೇಶನ ಮಾಡಲ್ಲಿದ್ದಾರೆ ಮಜಾ ಟಾಕೀಸ್ ಡೈರೆಕ್ಟರ್ ತೇಜಸ್ವಿ.. ಲೋಕೇಶ್ ಅವರ ಜನಪ್ರಿಯ ಸಿನಿಮಾದ ಗೀತೆಯ ಸಾಲನ್ನೆ ಸೃಜಾ ಚಿತ್ರಕ್ಕೆ ಇಡಲಾಗಿದೆ..
ಅಂದಹಾಗೆ ಈ ಸಿನಿಮಾದ ನಾಯಕಿಯಾಗಿ ಹರಿಪ್ರಿಯಾ ಕನ್ಫರ್ಮ್ ಆಗಿದ್ದಾರಂತೆ.. ಅಂದಹಾಗೆ ಈ ಸಿನಿಮಾದ ನಿರ್ಮಾಣವನ್ನ ಸ್ವತಃ ಲೋಕೇಶ್ ಅವರೆ ಮಾಡಲ್ಲಿದ್ದಾರೆ..