ಅಲ್ಲಿ ಅವರಿಗೆ ಕೇವಲ 5 ರೂಪಾಯಿಗೆ ಇಡ್ಲಿ+ಚಟ್ನಿ+ ಟೀ ಕೊಟ್ಟಿದ್ರು..! ಆ ಹಳ್ಳಿ ಅಜ್ಜನ ಹೋಟೆಲ್ನಲ್ಲಿ ಟಿಫನ್ ಗೆ ಇಷ್ಟೇ ದುಡ್ಡಾ?

Date:

ಕೊಡುವುದರಲ್ಲಿರೋ ಸುಖ ಕಿತ್ತುಕೊಳ್ಳೋದ್ರಲ್ಲಿ ಇರಲ್ಲ..! ಇದು ಬಹಳಷ್ಟು ಜನರ ಅಭಿಪ್ರಾಯ, ಅನುಭವ..! ಹಂಚಿ ತಿನ್ನೋದ್ರಲ್ಲಿ ಸುಖ ಇರುತ್ತೆ ಅನ್ನೋ ಮಾತು ಖಂಡಿತಾ ಸುಳ್ಳಲ್ಲ..! ತಾವು ಬಡತನದಲ್ಲಿದ್ದರೂ ಬೇರೆಯವರ ಹಸಿವನ್ನು ನೀಗಿಸೋ ಜನರಿದ್ದಾರೆ..! ಹೊಟ್ಟೆ ಹಸಿವು ಅಂದವರಿಗೆ ತಮಗಿಟ್ಟು ಕೊಂಡಿರೋದನ್ನೇ ಕೊಟ್ಟು ಮಾನವೀಯತೆ ಮೆರೆಯುತ್ತಿರೋ ಜೀವಗಳು ಎಲೆಮರೆಯ ಕಾಯಿಗಂತಿದ್ದಾರೆ..!
ಮೊನ್ನೆ ಹಾಗೇ ಹಾಯ್ತು, ಮುಂಜಾನೆ ವಿಶಾಖಪಟ್ಟಣದ ನರ್ಸಿಪಂತ್ನಮ್ ನಿಂದ ಲಂಬಸಿಂಗಿ ಎಂಬಲಿಗೆ ಹೋಗ್ತಾ ಇರ್ತಾರಂತೆ ದಿಲೀಪ್ ಮಿನೇಜಸ್. ದಿಲೀಪ್ ಬೆಳಿಗ್ಗೆ ಬೇಗನೇ ಪ್ರಯಾಣ ಬೆಳಸಿದ್ದಾರದ್ದರಿಂದ ದಾರಿ ಮದ್ಯದಲ್ಲಿ ಅವರಿಗೆ ಹೊಟ್ಟೆ ಹಸಿಯುತ್ತೆ..! ಏನಾದ್ರೂ ತಿಂದು ಟೀ ಕುಡಿದು ಮುಂದಕ್ಕೆ ಹೋಗಣ ಅಂತ ಒಂದು ಹಳ್ಳಿಲಿ ಬೈಕ್ ನಿಲ್ಲಿಸ್ತಾರೆ..! ಅಲ್ಲಿ ಒಬ್ಬ ವೃದ್ಧರು ಟೀ ಮಾಡ್ತಾ ಇರೋದನ್ನು ನೋಡ್ತಾರೆ..! ಅದೊಂದು ಸಣ್ಣ ಟೀ ಸ್ಟಾಲ್..! ತಾತ ಒಂದ್ ಕಪ್ ಬಿಸಿಬಿಸಿ ಟೀ ಕೊಡಿ, ದಿಲೀಪ್ ಕೇಳಿದ್ರು. ಅಜ್ಜ ಟೀ ಕೊಟ್ಟು ಏನೋ ಅವರ ಭಾಷೆಯಲ್ಲಿ ಹೇಳಿದ್ರು..! ಆ ಲೋಕಲ್ ಲಾಂಗ್ವೇಜ್ ದಿಲೀಪ್ಗೆ ಅರ್ಥ ಆಗಲ್ಲ..! ಟೀ ಕುಡಿತಾನೇ ದಿಲೀಪ್, ಕೇಳ್ತಾರೆ, ಮಾತು ಮತ್ತು ಸನ್ಹೆ ಮೂಲಕ “ಏನಾದ್ರೂ ತಿನ್ನಲಿಕ್ಕಿದೆಯಾ”..?! ಅಜ್ಜ, ಅಲ್ಲೇ ಪಕ್ಕದಲ್ಲೇ ಇದ್ದ ತನ್ನ ಹೆಂಡತಿ ಕಡೆ ತಿರುಗಿ ಅವರ ಭಾಷೆಯಲ್ಲೇ ಅದೇನೋ ಹೇಳಿ ಕಳಿಸ್ತಾರೆ..! ಅದೂ ಕೂಡ ದಿಲೀಪ್ಗೆ ಅರ್ಥ ಆಗಲ್ಲ…! ಪಾಪ, ಅವರಿಗೆ ಹಸಿವಾಗ್ತಾ ಇತ್ತು ಅಂತ ಅನ್ಸುತ್ತೆ, ಏನ್ ಕೊಡ್ತಾರೋ ತಿನ್ನೋಣ ಅಂತ ಸಮ್ನೆ ಇರ್ತಿರಬೇಕು…! ಅಷ್ಟೊತ್ತಿಗೆ ಆ ಅಜ್ಜನ ಹೆಂಡತಿ ದಿಲೀಪ್ ಗೆ ಗುಡಿಸಲು ಹೊರಗಿರುವ ಬೆಂಚ್ ಮೇಲೆ ಕೂರುವಂತೆ ಸೂಚಿಸ್ತಾರೆ..! ದಿಲೀಪ್ ಅಲ್ಲಿ ಕುಳಿತೊಡನೆ, ಆ ಅಜ್ಜಿ ಇಡ್ಲಿ ಮತ್ತು ಚಟ್ನಿ ಜೊತೆ ಬರ್ತಾರೆ..! ಟೀ ಜೊತೆ ಬಿಸಿಬಿಸಿ ಇಡ್ಲಿ, ಚಟ್ನಿನೂ ತಿಂದು ಬೆಳಗ್ಗಿನ ಉಪಹಾರದ ಕೆಲಸವನ್ನು ಮಾಡಿ ಕೈ ತೊಳ್ಕೋತ್ತಾರೆ ದಿಲೀಪ್.
ಪಾಕೇಟ್ನಿಂದ ದುಡ್ಡು ತೆಗೀತಾ ದಿಲೀಪ್ ಅಜ್ಜನಿಗೆ ಕೇಳ್ತಾರೆ, ಸರಿ, ಅಜ್ಜ ಎಷ್ಟಾಯ್ತು? ಐದು ರೂಪಾಯಿ ಅಂತಾರೆ ಅಜ್ಜ..! ದಿಲೀಪ್ ಗೆ ಆಶ್ಚರ್ಯ ಇಡ್ಲಿ, ಚೆಟ್ನಿ ಟೀಗೆ ಸೇರಿಸಿ ಕೇವಲ ಐದು ರೂಪಾಯಿನಾ? ನಾನು ಒಂದು ಪ್ಲೇಟ್ ಇಡ್ಲಿ ಮತ್ತು ಚಟ್ನಿ ಜೊತೆ ಟೀನೂ ಕುಡಿದಿದ್ದೇನಂತ ದಿಲೀಪ್ ಆ ಅಜ್ಜಗೆ ಸನ್ಹೆ ಮೂಲಕ ಗೊತ್ತು ಮಾಡ್ತಾರೆ..!
ಅಜ್ಜ, ಟೀ ಕಡೆ ತೋರಿಸಿ ಟೀ ದುಡ್ಡು ಮಾತ್ರ ಎಂದು ಅವರ ಭಾಷೆಯಲ್ಲಿ ದಿಲೀಪ್ಗೆ ತಿಳಿಸ್ತಾರೆ..! ಅಷ್ಟಕ್ಕೂ ಆ ಅಜ್ಜ-ಅಜ್ಜಿ ದಿಲೀಪ್ಗೆ ಅಷ್ಟೊಂದು ತಿನ್ನೋಕೆ ಕೊಟ್ಟು, ಕೇವಲ ಟೀಯ ದುಡ್ಡನ್ನು ಮಾತ್ರ ಪಡೆದುಕೊಂಡಿದ್ದೇಕೆ ಗೊತ್ತಾ? ದಿಲೀಪ್ ಅವರಿಗೂ ಆಮೇಲೆ ಗೊತ್ತಾಯ್ತು..?! ಅದು ಸಣ್ಣ ಟೀ ಸ್ಟಾಲ್ ಮಾತ್ರ..! ಅಲ್ಲಿ ತಿಂಡಿ, ಊಟ ಏನೂ ಸಿಗ್ತಾ ಇರಲ್ಲ..! ಆದರೆ ಹಸಿದು ಬಂದಿದ್ದ ದಿಲೀಪ್ ಗೆ ಅಜ್ಜ-ಅಜ್ಜಿ ತಮಗಂತ ಮಾಡಿಟ್ಟುಕೊಂಡಿದ್ದ ಇಡ್ಲಿ-ಚಟ್ನಿ ತಿನ್ನಿಸಿರ್ತಾರೆ..! ಆದರೆ ಮಾರಾಟಕ್ಕೆ ಅಂತ ಮಾಡಿದ್ದ ಟೀಯ ದುಡ್ಡನ್ನು ಮಾತ್ರ ತೆಗೆದುಕೊಂಡಿರ್ತಾರೆ..! ಇದನ್ನು ಸ್ವತಃ ದಿಲೀಪ್ ಮಿನೇಜಸ್ ಒಂದೆಡೆ ಬರೆದಿದ್ದಾರೆ..! ಅಜ್ಜ-ಅಜ್ಜಿ ಹೀಗೆ ಅದೆಷ್ಟೋ ಜನರಿಗೆ ಊಟ-ತಿಂಡಿ ಕೊಟ್ಟಿರಬಹುದಲ್ವಾ? ಇವರು ಇನ್ನೂ ನೂರುಕಾಲ ಚೆನ್ನಾಗಿ ಬಾಳಲಿ.

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

1 ಗಂಡು + 4 ಹೆಣ್ಣು = ಒಟ್ಟು ಐದು ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡಿದ ಮಹಾತಾಯಿ..!

ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಕಟ್ಟಿಗೆಯಾಗಿ ಪರಿವರ್ತನೆ ಹೊಂದುತ್ತಿದ್ದಾನೆ ಈ ಮಾನವ..! ವೈದ್ಯಕೀಯ ಲೋಕಕ್ಕೇ ಸವಾಲಾದ ಬಾಂಗ್ಲಾ ನಾಗರಿಕ..!

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...