ಇಂದಿನ ಟಾಪ್ 10 ಸುದ್ದಿಗಳು..! 02.02.2016

0
57

1. ಟಿಎಂಸಿ ನಾಯಕನ ಮನೆಯಲ್ಲೇ ಪತ್ತೆಯಾಯ್ತು 80 ಕಚ್ಚಾ ಬಾಂಬ್..!
ಕೋಲ್ಕತ್ತಾದ ಬೀರ್ಭೂಮ್ನ ನನೂರ್ ಎಂಬಲ್ಲಿ ಟಿಎಂಸಿ ನಾಯಕ ಸರೋಜ್ ಗೋಶ್ ಮನೆಯಲ್ಲಿ 80ಕ್ಕೂ ಹೆಚ್ಚು ಕಚ್ಚಾ ಬಾಂಬ್ ಗಳು ಪತ್ತೆಯಾಗಿದೆ.
ಟಿಎಂಸಿ ನಾಯಕನಮನೆ ಮೇಲೆ ದಾಳಿ ಮಾಡಿದಾಗ ಈ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಬಾಂಬ್ ಗಳು ಮತ್ತು ಬಾಂಬ್ ತಯಾರಿಕ ಸಲಕರಣೆಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2. ಅನುಪಮ್ ಖೇರ್ಗೆ ವೀಸಾ ನೀಡಲು ಒಪ್ಪದ ಪಾಕ್..!
ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ಅವರಿಗೆ ವೀಸಾ ನೀಡಲು ಪಾಕಿಸ್ತಾನ ನಿರಾಕರಿಸಿದೆ.
ಕರಾಚಿಯಲ್ಲಿ ಫ್ರೆಬ್ರವರಿ 5ರಂದು ನಡೆಯಲಿರುವ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಭಾರತದಿಂದ ಆಯ್ಕೆ ಮಾಡಿದ್ದ 18 ಮಂದಿಯಲ್ಲಿ 17 ಮಂದಿಗೆ ವೀಸಾ ನೀಡಲಾಗಿದೆ. ಆದರೆ ಅನುಪಮ್ ಕೇರ್ಗೆ ವೀಸಾ ನೀಡಲು ಪಾಕ್ ಹೈಕಮೀಷನ್ ನಿರಾಕರಿಸಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿ ಖೇರ್ ಟ್ವೀಟ್ ಮಾಡಿದ್ದಾರೆ.
ಆದೆ ಖೇರ್ ಆರೋಪವನ್ನು ಅಲ್ಲಗಳೆದಿರುವ ಪಾಕ್ ಹೈಕಮೀಷನ್ ವೀಸಾ ಕೋರಿ ನಮಗೆ ಅರ್ಜಿ ಬಂದಿಲ್ಲ, ಅರ್ಜಿಯೇ ಬರದಿದ್ದರೆ ನಿರಾಕರಿಸುವುದೇಗೆಂದು ಸ್ಪಷ್ಟಪಡಿಸಿದೆ.
೩. ರಾಜ್ ಕೋಟ್ ಟೀಂ ಆಯ್ತು`ಗುಜರಾತ್ ಲಯನ್ಸ್’..!

ಈ ಬಾರಿಯ ಐಪಿಎಲ್ ನಲ್ಲಿ ಕಣಕ್ಕಿಳಿಯಲಿರುವ ಹೊಸತಂಡ ರಾಜ್ಕೋಟ್ ತಂಡಕ್ಕೆ `ಗುಜರಾತ್ ಲಯನ್ಸ್’ ಎಂದು ನಾಮಕರಣ ಮಾಡಲಾಗಿದೆ. ಈ ಗುಜರಾತ್ ಸಿಂಹಳ ಸಾರಥ್ಯವನ್ನು ಸುರೇಶ್ ರೈನಾ ವಹಿಸಿಕೊಳ್ಳಲಿದ್ದಾರೆ.
ಐಪಿಎಲ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳಿಗೆ ಎರಡು ವರ್ಷ ನಿಷೇಧ ಹೇರಿದೆ. ಆದ್ದರಿಂದ ಆ ಎರಡು ತಂಡಗಳ ಬದಲಾಗಿ ಗುಜರಾತ್ ಲಯನ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಈ ಬಾರಿ ಅಖಾಡಕ್ಕೆ ಇಳಿಯಲಿವೆ.

4. ಶುಚಿತ್ವ ಕಾಪಾಡದ ಪಂಚತಾರ ಹೋಟೆಲ್ಗಳ ಮೇಲೆ ದಾಳಿ
ಕಸವಿಲೇವಾರಿ ಸಮರ್ಪಕವಾಗಿ ಮಾಡದ, ಅಡುಗೆ ಮೆನಯ ಶುಚಿತ್ವವನ್ನು ಕಾಪಾಡದ ಹಿನ್ನೆಲೆಯಲ್ಲಿ ಬೆಂಗಳೂರಿನ ಪಂಚತಾರ ಹೋಟೆಲ್ ಗಳ ಬಿಬಿಎಂಪಿ ಸ್ಥಾಯಿ ದಾಳಿ ನಡಸಿದೆ. ತಪಾಸೆಣೆ ಮಾಡಿ ದಂಡವನ್ನೂ ವಿಧಿಸಿದೆ. ನಗರದ ಪ್ರತಿಷ್ಠಿತ ಹೋಟೆಲ್ಗೆ ಅಂದಾಜು 25 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

5. ಹೆಣ್ಣು ಭ್ರೂಣ ಹತ್ಯೆ ತಡೆಗೆ ಲಿಂಗ ಪರೀಕ್ಷೆ ಕಡ್ಡಾಯ?
ಹೆಣ್ಣು ಭ್ರೂಣ ಹತ್ಯೆಯನ್ನುತಡೆಯುವ ಸಲುವಾಗಿ ಭ್ರೂಣದ ಲಿಂಗ ಪತ್ತೆಯ ಮೇಲಿರು ನಿಷೇಧವನ್ನು ತೆರವುಗೊಳಿಸುವ ಚಿಂತನೆಯನ್ನು ಕೇಂದ್ರ ಸರ್ಕಾರ ನಡೆಸಿದೆ. ಈ ಬಗ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ.
ಜೈಪುರದಲ್ಲಿ ಅಖಿಲ ಭಾರತ ಪ್ರಾದೇಶಿಕ ಸಂಪಾದಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಹೆಣ್ಣು ಹುಟ್ಟುವ ಮೊದಲೇ ಭ್ರೂಣದಲ್ಲಿಯೇ ಹತ್ಯೆ ಮಾಡಲೆತ್ನಿಸುವ ಜನರನ್ನು ಪತ್ತೆ ಮಾಡುವ ವ್ಯವಸ್ಥೆಯನ್ನು ರೂಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಗರ್ಭಿಣಿ ಹಾಗೂ ಆಕೆಯ ಹುಟ್ಟದ ಮಗುವನ್ನು ನೋಂದಾಣಿಯನ್ನು ಮಾಡುವಂತಹ ವ್ಯವಸ್ಥೆ ರೂಪಿಸಲು ಆಲೋಚಿಸಲಾಗಿದೆ ಎಂದು ಅವರು ತಿಳಿಸಿದರು.

6. ವಿಶ್ವಾದ್ಯಂತ ವ್ಯಾಪಿಸಿದ ಝಿಕಾ ವೈರಸ್ : ತುರ್ತು ಪರಿಸ್ಥಿತಿ ಘೋಷಿಸಿದ ಡಬ್ಲ್ಯುಎಚ್ಒ
ಝಿಕಾ ವೈರಸ್ ಭಯ ಎಲ್ಲೆಡೆ ಆವರಿಸಿದೆ. ಆಫ್ರಿಕಾ, ಆಗ್ನೇಯ ಏಷ್ಯಾ, ಫೆಸಿಪಿಕ್ ದ್ವೀಪಗಳಲ್ಲಿ ಆರಂಭದಲ್ಲಿ ಕಂಡುಬಂದಿದ್ದ ಝಿಕಾ ವೈರಸ್ ಈಗ ವಿಶ್ವಾದ್ಯಂತ ಹರಡ ತೊಡಗಿದೆ. ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

7. ಪಬ್ಲಿಕ್ ನಲ್ಲೇ ಕಿತ್ತಾಡಿಕೊಂಡ ಇಬ್ಬರು ಇನ್ಸ್ ಪೆಕ್ಟರ್ ಗಳು ಸಸ್ಪೆಂಡ್..!
ಪಬ್ಲಿಕ್ ನಲ್ಲಿ ಕಿತ್ತಾಡಿಕೊಂಡ ಆರೋಪದಲ್ಲಿ ಬೆಂಗಳೂರಿನ ಹನುಮಂತನಗರ ಠಾಣೆಯ ಇಬ್ಬರು ಇನ್ಸ್ ಪೆಕ್ಟರ್ ಗಳನ್ನು ಸಸ್ಪೆಂಡ್ ಮಾಡಲಾಗಿದೆ. ನಿನ್ನೆ (ಸೋಮವಾರ) ಸಂಜೆ ಸಾರ್ವಜನಿಕವಾಗಿ ಎಳದಾಡಿಕೊಂಡಿದ್ದ ಗಣೇಶ್ ಹಾಗೂ ಲಿಂಗಪ್ಪ ಎನ್ನೋ ಸಬ್ ಇನ್ಸ್ ಪೆಕ್ಟರ್ ಗಳನ್ನು ಅಮಾನತು ಮಾಡಿ ದಕ್ಷಿಣ ವಿಭಾಗದ ಡಿಸಿಪಿ ಬಿ.ಎಸ್ ಲೋಕೇಶ್ ಕುಮಾರ್ ಆದೇಶ ನೀಡಿದ್ದಾರೆ.
ಜಯಂತಿ ಎಂಬುವವರಿಗೆ ನಾಗರತ್ನ ಎಂಬುವವರು 15 ಲಕ್ಷ ರೂಪಾಯಿ ಸಾಲ ನೀಡಿದ್ದರು. ಜಯಂತಿ ನಾಗರತ್ನರಿಗೆ ಸಾಲ ಮರುಪಾವತಿ ಮಾಡದ ಕಾರಣ ಅವರಿಬ್ಬರ ನಡುವೆ ಜಗಳ ಮಾಡಿಕೊಂಡಿದ್ದರು. ನಾಗರತ್ನ ಹಣವಿಚಾರದಲ್ಲಿ ಕಿರುಕುಳ ನೀಡುತ್ತಿದ್ದಾರೆಂದು ಹನುಮಂತ ನಗರ ಠಾಣೆಗೆ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಲಿಂಗಪ್ಪ ನಾಗರತ್ನ, ಜಯಂತಿಯವರನ್ನು ನಿನ್ನೆ ಸಂಜೆ ಠಾಣೆಗೆ ಕರೆಸಿದ್ದಾರೆ. ಆಗ ಗಣೇಶ್ `ನಿಮ್ಮನ್ನು ಯಾರು ಕರೆಸಿದ್ದೆಂದು ಆ ಮಹಿಳೆಯರನ್ನು ಪ್ರಶ್ನಿಸಿದ್ದಾರೆ. ಆಗ ಗಣೇಶ್ ಮತ್ತು ಲಿಂಗಪ್ಪ ನಡುವೆ ಜಗಳವಾಗಿದೆ.

8. ಬಾಡಿಗೆ ತಾಯಿಯಿಂದ ಮಗು ಪಡೆದವರಿಗೂ ಹೆರಿಗೆ ರಜೆ

ಬಾಡಿಗೆ ತಾಯಿಯ ಮೂಲಕ ಮಗು ಪಡೆದು ತಾಯಿಯಾದವರೂ ಕೂಡ ಇತರೆ ಮಹಿಳೆಯರಂತೆಯೇ ಆರುತಿಂಗಳ ಹೆರಿಗೆ ರಜೆ ಪಡೆಯಲು ಅರ್ಹರೆಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

9. ಸ್ಮಾರ್ಟ್ ಸಿಟಿ ಆಯ್ಕೆಯಲ್ಲಿ ಕೇಂದ್ರ ತಾರತಮ್ಯ ಮಾಡಿಲ್ಲ : ವೆಂಕಯ್ಯ ನಾಯ್ಡು
ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಆರೋಪವನ್ನು ಕೇಂದ್ರ ನಗರಾಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಂ ವೆಂಕಯ್ಯ ನಾಯ್ಡು ತಳ್ಳಿಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೂರು ಹಂತದ ಸ್ವತಂತ್ರ ತಪಾಸಣ ಪದ್ದತಿ ಮೂಲಕ ನಗರಗಳನ್ನು ಆಯ್ಕೆ ಮಾಡಲಾಗಿದೆ. ಇಲ್ಲಿ ಯಾವುದೇ ತಾರತಮ್ಯ ನಡೆದಿಲ್ಲ ಎಂದು ತಿಳಿಸಿದರು.

10. ಪಠಾಣ್ ಕೋಟ್ ಕಂಟೋನ್ಮೆಂಟ್ ನಲ್ಲಿ ಶಂಕಿತ ಐಎಸ್ಐ ಏಜೆಂಟ್ ಬಂಧನ
ಪಾಕಿಸ್ತಾನದ ಬೇಹುಗಾರಕ ಸಂಸ್ಥೆ ಐಎಸ್ಐ ಏಜೆಂಟ್ ಒಬ್ಬನನ್ನು ಪಂಜಾಬ್ ಗುಪ್ತಚರ ದಳ ಬಂಧಿಸಿದೆ.
ಬಂಧಿತ ಪಠಾಣ್ಕೋಟ್ ಆರ್ಮಿ ಕಂಟೋನ್ಮೆಂಟ್ನ ಮಮೂನ್ ಕ್ಯಾಂಟಿನ್ನಲ್ಲಿ ಕೆಲಸ ಮಾಡುತ್ತಲೇ ಐಎಸ್ಐ ಪರವೂ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

LEAVE A REPLY

Please enter your comment!
Please enter your name here