ಡಿಸೆಂಬರ್ 30 ಕ್ಕೆ ಬೆಂಗಳೂರು ಬಂದ್..??
ಅಂಬರೀಶ್ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿರುವ ಬೆನ್ನಲ್ಲೇ, ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ಬಗ್ಗೆ ಸರ್ಕಾರ ಇದೇ ಡಿಸೆಂಬರ್ 24ರ ಒಳಗೆ ಸೂಕ್ತ ತೀರ್ಮಾನವನ್ನ ಕೈಗೊಳ್ಳಯವಂತೆ ವಿಷ್ಣು ಅಭಿಮಾನಿಗಳು ಡೆಡ್ ಲೈನ್ ನೀಡಿದ್ದಾರೆ..
ಸ್ಮಾರಕ ನಿರ್ಮಾಣ ಸಂಬಂಧ ಇಂದು ಅಭಿಮಾನಿಗಳ ಸಮ್ಮುಖದಲ್ಲಿ ಭಾರತಿ ವಿಷ್ಣುವರ್ಧನ್ ಅವರ ಮನೆಯಲ್ಲಿ ಮನೆಯಲ್ಲಿ ಸಭೆ ಕೂಡ ನಡೆದಿದೆ..ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಪುಣ್ಯಭೂಮಿಯನ್ನು ಹಾಗೆಯೇ ಬಿಟ್ಟು ಅಲ್ಲಿಯೇ ಸ್ಮಾರಕ ನಿರ್ಮಾಣಕ್ಕೂ ಜಾಗ ಕೊಡಬೇಕು. ಇಲ್ಲವಾದರೆ ಮೈಸೂರಿನಲ್ಲಾದರೂ ಸ್ಮಾರಕಕ್ಕೆ ಜಾಗ ಕೊಡಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.. ಈ ಬಗ್ಗೆ ಯಾವುದೇ ಸೂಕ್ತ ತೀರ್ಮಾನ ಕೈಗೊಳ್ಳಿದ್ದ ಪಕ್ಷದಲ್ಲಿ ಡಿಸೆಂಬರ್ 30ಕ್ಕೆ ಬೆಂಗಳೂರು ಬಂದ್ ಗೆ ಕರೆ ನೀಡುವುದಾಗಿಯು ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ..