ರಾಧಿಕಾ ಕುಮಾರಸ್ವಾಮಿ ಇತ್ತೀಚಿಗೆ ಸ್ಕ್ರಿಪ್ಟ್ ಆಯ್ಕೆ ಮಾಡುವಲ್ಲಿ ಸಾಕಷ್ಟು ಕಾಳಜಿ ವಹಿಸಿದ್ದಾರೆ. ಕೇವಲ ಮರ ಸುತ್ತುವ ಕಥೆಗಳು ಅಲ್ಲದೆ ಚಾಲೆಂಜಿಂಗ್ ರೋಲ್ ಗಳನ್ನು ಆಯ್ಕೆ ಮಾಡುಕೊಳ್ಳುತ್ತಿದ್ದಾರೆ. ಇದಕ್ಕೆ ಕನ್ನಡಿ ಎಂಬಂತೆ ದಮಯಂತಿ ಹಾಗೂ ಭೈರಾದೇವಿ ಚಿತ್ರಗಳೇ ಸಾಕ್ಷಿ.. ರಾಧಿಕಾ ಅಭಿನಯದ ಭೈರಾದೇವಿ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಚಿತ್ರದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡಿದ್ದಾರೆ. ಅಘೋರಿ ಗೆಟಪ್ ನಲ್ಲಿ ರಾಧಿಕಾ ಅವರನ್ನು ನೋಡಿದ್ರೆ ನೀವೆಲ್ಲಾ ಬಾಯಿಮೇಲೆ ಬೆರಳಿಟ್ಟುಕೊಳ್ಳೊದು ಗ್ಯಾರಂಟಿ. ಸುಮಾರು 400ಕ್ಕೆ ಹೆಚ್ಚು ಅಘೋರಿಗಳು ಜೊತೆ ‘ಭೈರಾದೇವಿ‘ ಸಿನಿಮಾದ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಅದ್ಧೂರಿ ಸೆಟ್, ನೂರಾರು ಅಘೋರಿ ಪಾತ್ರಧಾರಿಗಳ ನಡುವೆ ರಾಧಿಕಾ ಅವರ ಈ ಗೆಟಪ್ ಹೈಲೈಟ್ ಎನ್ನಬಹುದು.