ಗೂಗಲ್ ನಲ್ಲಿ ರಶ್ಮಿಕಾ ಹುಡುಕಾಟ..! ಗೂಗಲ್ ಸರ್ಜ್ ನಲ್ಲಿ ಕಿರಿಕ್ ಬೆಡಗಿ ಯಾವ ಸ್ಥಾನದಲ್ಲಿದ್ದಾರೆ ನೋಡಿ..
ಗೂಗಲ್ ನಲ್ಲಿ ಜನ ತಮಗೆ ಬೇಕಾದ ಮಾಹಿತಿಗಾಗಿ ಸರ್ಜ್ ಮಾಡೋದು ಕಾಮನ್.. ಸಿನಿಮಾ ಅಂತ ಬಂದ್ರೆ ಸೆಲೆಬ್ರಿಟಿಗಳ ಬಗ್ಗೆ ತಿಳಿದುಕೊಳ್ಳಲು ಇಷ್ಟ ಪಡ್ತಾರೆ.. ಸದ್ಯ ಸೌತ್ ಸಿನಿ ದುನಿಯಾದಲ್ಲಿ ಗೂಗಲ್ ತುಂಬಾ ಸರ್ಜ್ ಆದ ನಟನಟಿಯರು ಯಾರು ಎಂಬ ಮಾಹಿತಿಯನ್ನ ಹೊರ ಹಾಕಿದೆ ಗೂಗಲ್..
ಸೌತ್ ನಲ್ಲಿ ಈ ಬಾರಿ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಗೂಗಲ್ ಸರ್ಜ್ ನಲ್ಲಿ ಸ್ಥಾನ ಪಡೆದಿದ್ದಾರೆ.. 2018 ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾ ಹಾಗೆ ವೈಯಕ್ತಿಕ ವಿಚಾರಗಳಿಂದ ತುಂಬಾ ಸುದ್ದಿಯಾಗಿದ್ರು.. ಹೀಗಾಗೆ ರಶ್ಮಿಕಾ ಗೂಗಲ್ ಸರ್ಜ್ ನಲ್ಲಿ ಸ್ಥಾನ ಪಡೆದಿದ್ದು, ದಕ್ಷಿಣದ ಸಿನಿ ರಂಗದಲ್ಲಿ 5ನೇ ಸ್ಥಾನವನ್ನ ಪಡೆದುಕೊಂಡಿದ್ದಾರೆ..ಮೊದಲ ಸ್ಥಾನದಲ್ಲಿ ಚಿರಂಜೀವಿ, ನಾನಿ, ನಂದಮುರಿ ಬಾಲಕೃಷ್ಣ, ವಿಜಯ್ ದೇವರಕೊಂಡ, ಹಾಗೆ ರಶ್ಮಿಕಾ ಕ್ರಮವಾಗಿ ಇದ್ದಾರೆ..