ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬರನ್ನು ಇಂದು ಭೇಟಿ ಮಾಡಿದ್ದಾರೆ. ಆ ಅಭಿಮಾನಿ ಸಾಮಾನ್ಯ ಅಭಿಮಾನಿಯಲ್ಲ, ವಿಶೇಷ ಅಭಿಮಾನಿ… ಆಕೆಗೆ ದರ್ಶನ್ ಅಂದ್ರೆ ಪ್ರಾಣ. ಆ ಅಭಿಮಾನಿಯೇ ಪೂರ್ವಿಕಾ.. ದರ್ಶನ್ ಅವರ ಅಪ್ಪಟ್ಟ ಅಭಿಮಾನಿಯಾಗಿರುವ ಪೂರ್ವಿಕಾ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾಳೆ.
ಪೂರ್ವಿಕಾ ಯಜಮಾನ ಸಿನಿಮಾ ಶೂಟಿಂಗ್ ವೇಳೆ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಬಾಲಕಿಯ ಚಿಕಿತ್ಸೆಗೆ ಹಣ ನೀಡಿದ್ದಷ್ಟೇ ಅಲ್ಲದೆ ಖುದ್ದಾಗಿ ಭೇಟಿಯಾಗಿ ಆಕೆಗೆ ಚಾಲೆಂಚಿಂಗ್ ಸ್ಟಾರ್ ದರ್ಶನ್ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
ಇಂದು ಪೂರ್ವಿಕಾ ಹುಟ್ಟುಹಬ್ಬ, ಈ ಸಂದರ್ಭದಲ್ಲಿ ಪೂರ್ವಿಕಾ ಅವರನ್ನು ಭೇಟಿ ಮಾಡಿದ ದರ್ಶನ್ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿದರು. ಅಲ್ಲದೆ ಪೂರ್ವಕಾ ತನ್ನ ನೆಚ್ಚಿನ ನಾಯಕನ ಜೊತೆಗೆ ಕೆಲ ಸಮಯ ಕಾಲ ಕಳೆದರು.