ಮದುವೆ ಆಯ್ತು.. ಇನ್ಮುಂದೆಯೂ ಕಿಸ್ಸಿಂಗ್ ಸೀನ್ ಮಾಡ್ತೀರಾ ಅಂತ ಕೇಳಿದ್ದಕ್ಕೆ ಆ್ಯಂಡಿ ಹೇಳಿದ್ದೇನು..?
ಆ್ಯಂಡಿ ಹಾಗೆ ದಿಗಂತ್ ತಾವು ಅಂದುಕೊಂಡ ಹಾಗೆ ಸಂಪ್ರದಾಯ ಬದ್ಧವಾಗಿ ಮದುವೆಯಾಗಿದ್ದಾರೆ.. 10 ವರ್ಷಗಳ ಪ್ರೀತಿಗೆ ಮೊನ್ನೆಯಷ್ಟೆ ಮದುವೆಯ ಅರ್ಥ ನೀಡಿದ್ದಾರೆ.. ಸದ್ಯ ಮದುವೆಯಾದ ಬಳಿಕ ಮೊದಲ ಬಾರಿಗೆ ಮೀಡಿಯಾ ಮುಂದೆ ಬಂದಿದೆ ಸ್ಯಾಂಡಲ್ವುಡ್ ನ ಈ ಕ್ಯೂಟ್ ಜೋಡಿ..
ಈ ಸಂದರ್ಭದಲ್ಲಿ ಕೇಳಿಬಂದ ಪ್ರಶ್ನೆ ಅಂದ್ರೆ ಐಂದ್ರಿತಾ ಈಗ ಮದುವೆಯಾಗಿದ್ದಾರೆ.. ಈಗಲೂ ಕಿಸ್ಸಿಂಗ್ ಸೀನ್, ಎಕ್ಸಪೋಸ್ ಗಳಿರುವ ಸಿನಿಮಾಗಳಲ್ಲಿ ಅಭಿನಯಿಸ್ತಾರ ಅನ್ನೋದು.. ಈ ಬಗ್ಗೆ ದಿಗಂತ್ ಮನೆಯವರಿಂದ ಆಗಲಿ ಅಥವಾ ದಿಗಂತ್ ರಿಂದ ಆಗಲಿ ಯಾವುದೇ ನಿರ್ಬಂಧ ಇಲ್ವಂತೆ.. ಕಥೆಗೆ ತಕ್ಕಹಾಗೆ ನಟಿಸುತ್ತೇನೆ ಎಂದಿದ್ದಾರೆ…
ಇನ್ನು ಈ ಬಗ್ಗೆ ಮಾತನಾಡಿದ ದಿಗಂತ್ ಕಾಯಕವೇ ಕೈಲಾಸ ಎನ್ನುವ ಮೂಲಕ ಹೆಂಡತಿಯ ಮಾತಿಗೆ ಬೆಂಬಲ ನೀಡಿದ್ದಾರೆ.. ಇನ್ನು ಸಂಪ್ರಾದಯ ಬದ್ಧವಾಗಿ ಮದುವೆಯಾದ ಈ ಜೋಡಿ ಸ್ಯಾಂಡಲ್ ವುಡ್ ಮತ್ತೊಂದು ಕ್ಯೂಟ್ ಪೇರ್ ಆಗಿದೆ..