ಸೆನ್ಸಾರ್ ನಲ್ಲಿ ಪಾಸ್ ಆದ ಕುರುಕ್ಷೇತ್ರ.. ರಿಲೀಸ್ ಯಾವಾಗ..?
ವರ್ಷಾಂತ್ಯಕ್ಕೆ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ನೀಡಿದೆ ಕುರುಕ್ಷೇತ್ರ ಚಿತ್ರ. ಅದೇನು ಅಂದರೆ, ‘ಕುರುಕ್ಷೇತ್ರ’ ಚಿತ್ರದ 2ಡಿ ಅವತರಣಿಕೆಗೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಈ ವಿಚಾರ ದರ್ಶನ್ ಅಭಿಮಾನಿಗಳಿಗೆ ಖುಷಿ ತಂದಿದೆ.
ಪೋಸ್ಟ್ ಪ್ರೊಡಕ್ಷನ್ ಕೆಲಸದಿಂದ ಸಿನಿಮಾ ರಿಲೀಸ್ ಆಗಲು ಕೊಂಚ ವಿಳಂಬವಾಯಿತು. ಆದರೆ ಈಗ ಸೆನ್ಸಾರ್ ಮಂಡಳಿ ಸಿನಿಮಾ ವೀಕ್ಷಿಸಿ ಪ್ರಮಾಣ ಪತ್ರ ನೀಡಿದೆ. ಸೆನ್ಸಾರ್ ನಂತರ ಕುರುಕ್ಷೇತ್ರ ಚಿತ್ರ ಆದಷ್ಟು ಬೇಗ ತೆರೆಗೆ ಬರಲಿದೆ ಎನ್ನುವ ಭರವಸೆ ಅಭಿಮಾನಿಗಳಲ್ಲಿ ಮೂಡಿದೆ..ಎಲ್ಲ ಅಂದುಕೊಂಡಂತೆ ಆದ್ರೆ ಜನವರಿಯಲ್ಲಿ ಕುರುಕ್ಷೇತ್ರ ದರ್ಶನ ಸಿಗಲಿದೆ..
ಬಹುಕೋಟಿ ವೆಚ್ಚದಲ್ಲಿ ತಯಾರಾದ ಕುರುಕ್ಷೇತ್ರದಲ್ಲಿ ಅಂಬರೀಷ್, ರವಿಚಂದ್ರನ್, ಭಾರತಿ ವಿಷ್ಣುವರ್ಧನ್, ಅರ್ಜುನ್ ಸರ್ಜಾ, ಹರಿಪ್ರಿಯಾ, ಮೇಘನಾ ರಾಜ್, ಸೋನು ಸೂದ್, ನಿಖಿಲ್ ಕುಮಾರ್ ಸೇರಿ ಇನ್ನೂ ಹಲವಾರು ಕಲಾವಿದರ ತಾರಾಗಣವಿದೆ.