ಇಂದು ವಿದೇಶದಲ್ಲಿ ತೆರೆಕಂಡ ಕೆಜಿಎಫ್ ಸಿನಿಮಾ ಬಗ್ಗೆ ಚಿತ್ರ ವಿರ್ಮಶಕರು ಹೇಳಿದ್ದೇನು..?
ಇಂದು ವಿದೇಶದಲ್ಲಿ ಕೆಜಿಎಫ್ ಸಿನಿಮಾ ತೆರೆಕಂಡಿದೆ.. ನಾಳೆ ಭಾರತದಾದ್ಯಂತ ಕೆಜಿಎಫ್ ಬಿಡುಗಡೆಗೊಳ್ಳಲಿದೆ.. ಈಗಾಗ್ಲೇ ವಿದೇಶಿ ಸಿನಿ ರಸಿಕರು ಸೇರಿದಂತೆ, ಚಿತ್ರ ವಿಮರ್ಶಕರು ಇಂದು ಕೆಜಿಎಫ್ ಚಿತ್ರವನ್ನ ಕಣ್ತುಂಬಿಕೊಂಡಿದ್ದಾರೆ.. ಅಷ್ಟೆ ಅಲ್ಲ ಸಿನಿಮಾದ ಬಗ್ಗೆಯು ಮಾತನಾಡಿದ್ದಾರೆ..
ಯುಎಇನಲ್ಲಿ ಬಿಡುಗಡೆಯಾಗಿದ್ದು, ಯುಎಇ ಮೂಲದ ಪತ್ರಕರ್ತ ಹಾಗೂ ವಿಮರ್ಶಕ ಉಮರ್ ಸೈಂಧು ಚಿತ್ರ ವೀಕ್ಷಣೆ ಮಾಡಿ ಹೀಗೆ ಹೇಳಿದ್ದಾರೆ..ಚಿತ್ರವು ಖಂಡಿತ ಯಶಸ್ಸು ಕಾಣಲಿದೆ. ಆರಂಭದಿಂದ ಕೊನೆಯವರೆಗೂ ಚಿತ್ರದ ಕತೆ ಪ್ರೇಕ್ಷಕರ ಕೂತೂಹಲವನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.. ಯಶ್ ತಮ್ಮ ನಟನೆಯಿಂದ ಪ್ರೇಕ್ಷಕರ ಮನ ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.