ಹೊಸ ವರ್ಷಕ್ಕೆ ಸಿಗಲಿದೆ 20 ರೂಗಳ ಹೊಸ ನೋಟು..!!
ಹೌದು, ಈಗಾಗ್ಲೇ 2000, 500, 200, 50 ಹಾಗು 10 ರೂ ಮುಖಬೆಲೆಯ ಹೊಸ ನೋಟುಗಳು ಜನಸಾಮಾನ್ಯರ ಕೈ ಸೇರಿದೆ.. ಸದ್ಯಕ್ಕೆ ಹಳೆ ನೋಟುಗಳ ಪೈಕಿ 100 ರೂ ಹಾಗು 20 ರೂ ನೋಟುಗಳು ಚಲಾವಣೆಯಲ್ಲಿದ್ದು, ಈ ಎರಡರ ಬದಲಿಯಾಗಿ ಹೊಸ ನೋಟುಗಳು ಚಲಾವಣೆಗೆ ಬಂದಿಲ್ಲ..
ಆದರೆ ಸದ್ಯದಲ್ಲೆ 20 ರೂ ನೋಟುಗಳ ಸ್ಥಾನವನ್ನ ಹೊಸ 20 ರೂ ಮುಖಬೆಲೆಯ ಗರಿಗರಿ ಹೊಸ ನೋಟುಗಳು ಆವರಿಸಿಕೊಳ್ಳಲಿವೆ.. ಈಗಾಗ್ಲೇ ಲಭ್ಯವಿರುವ ಹೊಸ ನೋಟುಗಳ ಬಣ್ಣ,ಗಾತ್ರ ಎಲ್ಲವು ಬದಲಾಗಿದ್ದು, ಹೊಸ ನೋಟುಗಳ ಗಾತ್ರದಲ್ಲೇ 20 ರೂಪಾಯಿ ನೋಟು ಮುಂದಿನ ವರ್ಷದಿಂದ ಚಲಾವಣೆಗೆ ತರಲು ಆರ್ ಬಿಐ ಮುಂದಾಗಿದೆ.. ಈ ಮೂಲಕ 100 ರೂ ನೋಟವನ್ನ ಹೊರತು ಪಡೆಸಿ ಇನ್ನುಳಿದೆಲ್ಲ ನೋಟುಗಳಿಗೆ ಹೊಸ ರೂಪ ನೀಡಿದಂತಾಗಲಿದೆ..






