ರಾಮಸೇತುಗೆ ಸಂಚರಿಸಲಿದೆ ರೈಲು.. ಕೇಂದ್ರದಿಂದ ಹೊಸ ಗಿಫ್ಟ್..!!
ಹೊಸ ವರ್ಷಕ್ಕೆ ಕೇಂದ್ರ ಸರ್ಕಾರ ಜನತೆಗೆ ಭರ್ಜರಿ ಗಿಫ್ಟ್ ಗಳನ್ನ ನೀಡುತ್ತಿದೆ.. ಸದ್ಯ ರೈಲ್ವೆ ಇಲಾಖೆ ರಾಮಸೇತುವಿಂದ ಧನುಸ್ ಕೋಡಿಗೆ ರೈಲು ಸಂಪರ್ಕ ಕಲ್ಪಿಸಲು ಮುಂದಾಗಿದೆ.. ರಾಮೇಶ್ವರಂ–ಧನುಸ್ ಕೋಡಿ ನಡುವಿನ ಅಂತರ 17 ಕಿ.ಮೀ ನಷ್ಟಿದೆ.. ಹೀಗಾಗೆ ಹೊಸ ಬ್ರಾಡ್ ಗೇಜ್ ರೈಲು ನಿರ್ಮಾಣಕ್ಕೆ ರೈಲ್ವೇ ಇಲಾಖೆ ಸಮ್ಮತಿಯನ್ನ ನೀಡಿದೆ..
ಈ ಹಿಂದೆ ಅಂದರೆ 1964 ರಲ್ಲಿ ರಾಮೇಶ್ವರದಲ್ಲಿ ಸಂಭವಿಸಿದ್ದ ಭೀಕರ ಚಂಡಮಾರುತದಲ್ಲಿ ಧನುಸ್ ಕೋಡಿ ರೈಲು ನಿಲ್ದಾಣ ನಾಶವಾಗಿತ್ತು.. ಇದಾದ ನಂತರ ಈ ರೈಲು ಮಾರ್ಗವನ್ನ ದುರಸ್ತಿ ಮಾಡಿಯೇ ಇರಲಿಲ್ಲ.. ಇದೀಗ 208 ಕೋಟಿ ರೂ ವೆಚ್ಚದಲ್ಲಿ ಈ ಮಾರ್ಗವನ್ನ ಪುನರ್ ನಿರ್ಮಾಣ ಮಾಡಲು ರೈಲ್ವೇ ಇಲಾಖೆ ಮುಂದಾಗಿದೆ..



