ವಿಶ್ವದಾಖಲೆ ನಿರ್ಮಿಸಿದ ನಮ್ಮ ಯೋಧರು..! ಮಾಡಿದ ಸಾಧನೆ ಏನು ಗೊತ್ತಾ..?
ಮೈನಸ್ 25 ರಿಂದ 30 ಡಿಗ್ರಿ ಸೆಲ್ಸಿಯಸ್ ನಲ್ಲಿ, 17 ಸಾವಿರ ಅಡಿ ಎತ್ತರದ ಸಿಯಾಚಿನ್ನ ಖಾಂದ ಗ್ಲೇಸಿಯರ್ ಪ್ರದೇಶದಲ್ಲಿ ಕೆಟ್ಟು ನಿಂತ ಯುದ್ದ ಹೆಲೆಕಾಪ್ಟರನ್ನು ರಿಪೇರಿ ಮಾಡಿ ಬೇಸ್ ಕ್ಯಾಂಪ್ ಗೆ ವಾಪಸ್ ತಂದು ಇತಿಹಾಸ ನಿರ್ಮಿಸಿದ್ದಾರೆ ನಮ್ಮ ಸೈನಿಕರು.. ಈ ಯುದ್ದ ವಿಮಾನ ಕಳೆದ ಜನವರಿಯಲ್ಲಿ ಸೈನಿಕರಿಗೆ ನಿತ್ಯ ಬಳಕೆಯ ವಸ್ತುಗಳನ್ನು ಪೂರೈಸಲು ಗ್ಲೇಸಿಯರ್ ಗೆ ತೆರಳಿತ್ತು..
ಈ ಸಂದರ್ಭದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಮಂಜಿನ ಮೇಲೆಯೇ ಇಳಿಸಿ ಬರಲಾಗಿತ್ತು.. ಕೆಟ್ಟ ಈ ಹೆಲಿಕಾಪ್ಟರ್ ಅನ್ನ ಎಎಲ್ಎಚ್ ಸ್ಕ್ವಾಡ್ರನ್ 203 ನ ಪೈಲಟ್ ಗಳು ಮತ್ತು ತಂತ್ರಜ್ಞರು ಜುಲೈನಲ್ಲಿ ಎಂಜಿನ್ ಮತ್ತು ಬ್ಲೇಡ್ ಗಳನ್ನ ರಿಪೇರಿ ಮಾಡುವ ಮೂಲಕ, ಜೀವದ ಹಂಗು ತೊರೆದು ವಾಪಸ್ ತರುವಲ್ಲಿ ಯಶಸ್ವಿಯಾಗಿದ್ದಾರೆ…