ಇವರುಗಳಲ್ಲಿ ಯಾರು ಆಗ್ತಿದ್ದಾರೆ ಮದಗಜ ನಾಯಕಿ ಗೊತ್ತಾ..?
ಮಫ್ತಿ ಚಿತ್ರದ ನಂತರ ರೋರಿಂಗ್ ಸ್ಟಾರ್ ಶ್ರೀ ಮುರಳಿ ಮದಗಜನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಮದಗಜ ಫಸ್ಟ್ ಲುಕ್ ರಿಲೀಸ್ ಆಯಿತು. ಇದೀಗ ಮದಗಜ ಚಿತ್ರತಂಡದಿಂದ ಮತ್ತೊಂದು ಸುದ್ದಿ ಹೊರ ಬಂದಿದೆ. ಅದುವೇ ಮದಗಜನ ನಾಯಕಿ..
ಮದಗಜನಿಗೆ ನಾಯಕಿ ಯಾರಾಗ್ತಾರೆ..? ಎಂಬ ಕುತೂಹಲ ಶುರುವಾಗಿದೆ. ಸ್ಯಾಂಡಲ್ವುಡ್ ಟಾಪ್ ನಟಿಯರ ಹೆಸರುಗಳು ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ ಮದಗಜ ನಾಯಕಿಯರ ರೇಸ್ ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್, ರಶ್ಮಿಕಾ ಮಂದಣ್ಣ ಹಾಗೂ ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ ಹೆಸರುಗಳು ಬಂದಿದೆ.
ಆದರೆ ಇವರಲ್ಲಿ ಯಾರು ಎಂಬುದು ಇನ್ನು ಫೈನಲ್ ಆಗಿ ಡಿಸೈಡ್ ಆಗಬೇಕಿದೆ. ಒಟ್ಟಿನಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಯಾವುದೇ ಕಾಂಪ್ರಮೈಸ್ ಆಗದೆ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಮದಗಜ ಚಿತ್ರ ದೊಡ್ಡ ಬಜೆಟ್ ಸಿನಿಮಾವಾಗಿದ್ದು, ಶ್ರೀ ಮುರಳಿ ಭಾರತದ ಟಾಪ್- 50 ಶ್ರೀಮಂತರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳಲಿದ್ದಾರೆ.