ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲಿದ್ದಾರೆ ಪ್ರಕಾಶ್ ರೈ..
ಹೌದು, ಸದ್ಯ ನಟನೆಗಿಂತ ಜಸ್ಟ್ ಆಸ್ಕಿಂಗ್ ಮೂಲಕ ಹೆಚ್ಚು ಸುದ್ದಿಯಾಗಿರುವ ಪ್ರಕಾಶ್ ರೈ ಧೃಡನಿರ್ಧಾರ ಕೈಗೊಂಡಿದ್ದಾರೆ.. ಮುಂಬರಲಿರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಾನು ರೆಡಿ ಎಂದಿದ್ದಾರೆ.. ಈ ಮೂಲಕ ಸಂಸತ್ ನಲ್ಲಿ ಜನರ ಪರಿವಾಗಿ ಜಸ್ಟ್ ಆಸ್ಕಿಂಗ್ ಅಭಿಯಾನ ಶುರು ಮಾಡಲು ಮುಂದಾಗಿದ್ದಾರೆ.
ಕೇಂದ್ರ ಸರ್ಕಾರದ ಹಲವು ಯೋಜನೆಗಳು, ನಿಲುವುಗಳ ವಿರುದ್ದ ಕಿಡಿಕಾರುತ್ತಿದ್ದ ಪ್ರಕಾಶ್ ರೈ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ದವಾಗಿದ್ದಾರೆ.. ಈಗಾಗ್ಲೇ ತಮಿಳುನಾಡು, ತೆಲಂಗಾಣದಲ್ಲಿ ಹಳ್ಳಿಗಳನ್ನ ದತ್ತು ಪಡೆದಿದ್ದು, ಕರ್ನಾಟಕದಲ್ಲಿ ಹಲವು ಶಾಲೆಗಳನ್ನ ದತ್ತು ಪಡೆದುಕೊಂಡು ತಮ್ಮ ಸಾಮಾಜಮುಖಿ ಕರ್ತವ್ಯಗಳಲ್ಲಿ ತೊಡಗಿಕೊಂಡಿದ್ದಾರೆ..
ಸದ್ಯ ಹೊಸ ವರ್ಷದ ಶುಭಾಶಯವನ್ನ ತಿಳಿಸುವ ಮೂಲಕ ನಾನು ಈ ಬಾರಿ ಲೋಕಸಭಾ ಎಲೆಕ್ಷನ್ ಗೆ ನಿಲ್ಲೋದಾಗಿ ಹೇಳಿದ್ದಾರೆ… ಆದರೆ ಯಾವ ರಾಜ್ಯದಲ್ಲಿನ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲಿದ್ದಾರೆ ಎಂಬುದನ್ನ ಕಾದು ನೋಡಬೇಕು..