ಕೇಂದ್ರದಿಂದ ನ್ಯೂ ಇಯರ್ ಗಿಫ್ಟ್..!! ಗ್ಯಾಸ್ ಬೆಲೆ 120 ರೂ ಇಳಿಕೆ..
ಹೌದು, ಕೇಂದ್ರ ಸರ್ಕಾರ ಹೊಸ ವರ್ಷದ ಮೊದಲ ದಿನವೇ ಸಿಹಿ ಸುದ್ದಿ ನೀಡಿದೆ.. ಅದು ದಿನ ಬಳಕೆಯ ಅಡುಗೆ ಅನಿಲದಲ್ಲಿ ಭಾರೀ ಇಳಿಕೆಯನ್ನ ಮಾಡಿ.. ಈ ಮೂಲಕ ಸಬ್ಸಿಡಿ ರಹಿತ ಗ್ಯಾಸ್ ಮೇಲೆ 120.50 ರೂ ಗಳನ್ನ ಇಳಿಸಲಾಗಿದೆ.. ಈ ಹೊಸ ದರವು ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ..
ಬೆಲೆ ಇಳಿಕೆಗೆ ಕಾರಣ..
ಸದ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ ಬೆಲೆಗಳ ಕುಸಿತ ಹಾಗು ಡಾಲರ್ ಎದುರು ರುಪಾಯಿ ಮೌಲ್ಯ ಏರಿಕೆಯನ್ನ ಕಂಡಿದೆ.. ಹೀಗಾಗೆ ಸರ್ಕಾರವು ತೈಲದ ಬೆಲೆಯನ್ನ ಕಡಿಮೆ ಮಾಡಿದೆ..ಈ ಹಿಂದೆ ದೆಹಲಿಯಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ 809.50 ರೂಗಳಿತ್ತು.. ಈಗ 689 ರೂಗಳಿಕೆ ಇಳಿಕೆಯಾಗಿದೆ.. ಸಬ್ಸಿಡಿ ಎಲ್ ಪಿಜಿ ಗ್ಯಾಸ್ ನ ಹೊಸ ಬೆಲೆ 494.99 ಆಗಿರಲ್ಲಿದ್ದು, ಈ ಹಿಂದೆ 500.90 ರೂಗಳಿತ್ತು..