ಹೊಸ ವರ್ಷಕ್ಕೆ ದಾಖಲೆ ಬರೆದ ಕೆಜಿಎಫ್..!!
ಕೆಜಿಎಫ್ ಸಿನಿಮಾ ಬಿಡುಗಡೆಯಾಗಿನಿಂದಲು ಇಲ್ಲಿವರೆಗು ಪ್ರೇಕ್ಷಕರನ್ನ ಥಿಯೇಟರ್ನತ್ತ ಸೆಳೆಯುತ್ತಿದೆ.. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲು ಕೆಜಿಎಫ್ ಅಬ್ಬರ ಜೋರಾಗಿದ್ದು, ಕ್ರಿಸ್ಮಸ್ ನಿಂದ ಹಿಡಿದು ಹೊಸ ವರ್ಷದ ವರೆಗು ಕೆಜಿಎಫ್ನ ತಡೆದು ನಿಲ್ಲಿಸುವವರೆ ಇಲ್ಲವಂತಾಗಿದೆ.. ಹೀಗಾಗೆ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ ದಾಖಲೆ ಬರೆದಿದೆ..
ಹೇಳಿ ಕೇಳಿ ಪ್ರೇಕ್ಷಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಕೆಜಿಎಫ್ ಸಿನಿಮಾ ಹಲವೆಡೆ ಹೌಸ್ ಫುಲ್ ಪ್ರದರ್ಶನವನ್ನ ಕಾಣುತ್ತಿದೆ.. ಹೀಗಾಗೆ ಮೊದಲ ಕನ್ನಡ ಸಿನಿಮಾವೊಂದು ಜನವರಿ 1 ಕ್ಕೆ 150 ಕೋಟಿಯನ್ನ ಬಾಜಿಕೊಂಡಿದೆ.. ಈ ಮೂಲಕ ಯಶ್ ಸಿನಿಮಾ ನೂತನ ವರ್ಷಾರಂಭದಲ್ಲಿ ಹೊಸ ದಾಖಲೆಯನ್ನ ಬರೆದಿದೆ.. ಕನ್ನಡದಲ್ಲೆ 87 ಕೋಟಿ ರೂಪಾಯಿಯನ್ನ ತನ್ನದಾಗಿಸಿಕೊಂಡಿದೆ ಕೆಜಿಎಫ್.. ಇದು ಸಹ ದಾಖಲೆಯಾಗಿದ್ದು, ರಾಜಕುಮಾರ ಒಟ್ಟಾರೆ ಕಲೆಕ್ಷನ್ 75 ಕೋಟಿಯಾಗಿತ್ತು..