ಸ್ಯಾಂಡಲ್ವುಡ್ ಸ್ಟಾರ್ ಗಳಿಗೆ ಶಾಕ್ ಕೊಟ್ಟ ಐಟಿ.. ಅಪ್ಪು-ಯಶ್ ಸೇರಿದಂತೆ ನಿರ್ಮಾಪಕರ ಮನೆ ಮೇಲೆ ದಾಳಿ..!!
ಹೌದು, ಇಂದು ಚಂದನವನದಲ್ಲಿ ದೊಡ್ಡ ಸುದ್ದಿಯಾಗಿರೋದು ಐಟಿ ಅಧಿಕಾರಿಗಳು ನಡೆಸಿರುವ ದಾಳಿ.. ಸದ್ಯ ಕನ್ನಡದ ಹೆಸರಾಂತ ನಟರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.. ಪುನೀತ್ ರಾಜ್ ಕುಮಾರ್ ಅವರ ನಿವಾಸ ಸೇರಿದಂತೆ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.. ಇನ್ನು ಯಶ್ ಕೆಜಿಎಫ್ ಮೂಲಕ ಸಕ್ಸಸ್ ಅನ್ನ ಪಡೆದುಕೊಂಡಿದ್ದು ಇಂದು ಅವರ ಮನೆ ಮೇಲೆ ದಾಳಿ ನಡೆದಿದೆ..
ಇನ್ನು ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ದಿ ವಿಲನ್ ಚಿತ್ರದ ನಿರ್ಮಾಪಕರಾದ ಸಿ.ಆರ್.ಮನೋಹರ್ ಸೇರಿದಂತೆ ಕೆಜಿಎಫ್ ನಿರ್ಮಾಪಕರಾದ ವಿಜಯ್ ಕಿರಗಂದೂರು ಅವರ ನಿವಾಸ ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆಯನ್ನ ಕೈಗೊಂಡಿದೆ..