ಮತ್ತೆ ಅನಾರೋಗ್ಯ ಶ್ರೀಗಳು ಆಸ್ಪತ್ರೆಗೆ ಶಿಫ್ಟ್..
ನಡೆದಾಡುವ ದೇವರು ಶ್ರೀ ಸಿದ್ದಗಂಗಾ ಮಠದ ಹಿರಿಯರಾದ ಶಿವಕುಮಾರ ಸ್ವಾಮಿಗಳಿಗೆ ಮತ್ತೆ ಅನಾರೋಗ್ಯ ಉಂಟಾಗಿದೆ.. ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಮಠದಲ್ಲಿ ಚೇತರಿಸಿಕೊಳ್ಳುತ್ತಿದ ಶ್ರೀಗಳಿಗೆ ಮತ್ತೆ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿದೆ…
ಕೆಲ ದಿನಗಳಿಂದ ಮಠದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದ್ರು, ಸೋಂಕು ಪದೇ ಪದೇ ಶಿವಕುಮಾರ ಸ್ವಾಮಿಗಳನ್ನ ಬಾದಿಸುತ್ತಿದೆ.. ಹೀಗಾಗೆ ಇಂದು ಮಠದಿಂದ ಶ್ರೀಗಳನ್ನ ಆಂಬುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಸಿದ್ದಗಂಗಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.. ಸದ್ಯ ಸೋಂಕು ಬಾರದಂತೆ ಆರೈಕೆ ಮಾಡಬೇಕಾಗಿರುವುದರಿಂದ ಶ್ರೀಗಳನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ..