ಬಾಲಿವುಡ್ ಗೆ ಗೀತಾ ಗೋವಿಂದಂ.. ಹೀರೊ ಯಾರು ಗೊತ್ತಾ..?

Must read

ಬಾಲಿವುಡ್ ಗೆ ಗೀತಾ ಗೋವಿಂದಂ.. ಹೀರೊ ಯಾರು ಗೊತ್ತಾ..?

ತೆಲುಗಿನ ಸೂಪರ್ ಹಿಟ್ ಸಿನಿಮಾ ಗೀತಾ ಗೋವಿಂದಂ.. ಈ ಚಿತ್ರ ವಿಜಯ್ ದೇವರಕೊಂಡ ಹಾಗೆ ರಶ್ಮಿಕಾಗೆ ದೊಡ್ಡ ಯಶಸ್ಸನ್ನ ನೀಡಿತ್ತು.. ಈ ಸಿನಿಮಾವಾದ ಬಳಿಕ ಈ ಇಬ್ಬರ ಸ್ಟಾರ್ ಗಿರಿ ಚೇಂಚ್ ಆಗಿ ಬ್ಯಾಕ್ ಬ್ಯಾಕ್ ಸಿನಿಮಾಗಳು ಹುಡುಕಿಕೊಂಡು‌ ಬಂತು..

ಒಂದು ಸಿನಿಮಾ ಒಂದು ಭಾಷೆಯಲ್ಲಿ ಸಕ್ಸಸ್ ಕಾಣುತ್ತಿದೆ ಎಂದಾದರೆ ಆ ಸಿನಿಮಾವನ್ನ ರಿಮೇಕ್ ಮಾಡೋಕೆ ಬೇರೆ ಭಾಷೆಯ ಸಿನಿಮಾ ಮಂದಿ ಮುಂದೆ ಬರೋದು ಕಾಮನ್.. ಈಗ ಗೀತಾ ಗೋವಿಂದಂ ಸಿನಿಮಾಗೂ ಇಂತಹದೊಂದು ಆಫರ್ ಬಂದಿದ್ದು, ಸೌತ್ ನ ಈ ಚಿತ್ರ ಸೀದಾ ಬಾಲಿವುಡ್ ನಲ್ಲಿ ರಿಮೇಕ್ ಆಗಲಿದೆ..

ಹೌದು, ವಿಜಯ್ ದೇವರಕೊಂಡ ನಿರ್ವಹಿಸಿರುವ ಪಾತ್ರಕ್ಕೆ ಹಲವು ನಟರ ಹೆಸರು ಕೇಳಿ ಬಂದಿದ್ದು, ಅದರಲ್ಲಿ ಇಶಾಲ್ ಕಟ್ಟರ್ ಫೈನಲ್ ಆಗಿದ್ದಾರೆ ಎನ್ನಲಾಗ್ತಿದೆ.. ‘ಧಡಕ್’ ಸಿನಿಮಾದ ಮೂಲಕ ಸಿನಿ ಕೆರಿಯರ್ ಶುರು ಮಾಡಿರುವ ಈತ ಈಗಾಗ್ಲೇ ಗೀತಾ ಗೋವಿಂದಂ ಸಿನಿಮಾವನ್ನ ನೋಡಿದ್ದಾನಂತೆ.. ಕಥೆ ಇಷ್ಟವಾಗಿದ್ದು ನಾನು ಮಾಡೋಕೆ ರೆಡಿ ಅಂತ ಹೇಳಿದ್ದಾನಂತೆ.. ಆದರೆ ರಶ್ಮಿಕಾ ಕ್ಯಾರೆಕ್ಟರ್ ಅನ್ನ ಯಾರು ಪ್ಲೇ ಮಾಡಲ್ಲಿದ್ದಾರೆ ಅನ್ನೋದು ಮಾತ್ರ ಇನ್ನು ಫೈನಲ್ ಆಗಿಲ್ಲ..

- Advertisement -spot_img

More articles

- Advertisement -spot_img

Latest article