ಕಳೆದ ವರ್ಷ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದ ಮೋದಿ ಸರ್ಕಾರ ಇದೀಗ ಎರಡು ಸಾವಿರ ನೋಟುಗಳನ್ನು ಮುದ್ರಣವನ್ನು ನಿಲ್ಲಿಸಲಿದೆ. 2000 ಸಾವಿರ ನೋಟುಗಳನ್ನು ಕೇಂದ್ರ ಸರ್ಕಾರ ಚಲಾವಣೆಗೆ ತಂದ ನಂತರ, ಸಣ್ಣ ಮೊತ್ತದ ಅಗತ್ಯ ಸಾಮಗ್ರಿಗಳನ್ನು ಖರೀದಿಸುವವರಿಗೆ ಚಿಲ್ಲರೆ ಸಮಸ್ಯೆ ಕಾಡುತ್ತಿದೆ. ಹೀಗಾಗಿ 200 ರೂ. ಮುಖಬೆಲೆಯ ನೋಟು ಬಿಡುಗಡೆಯಾದರೆ ಈ ಸಮಸ್ಯೆ ನಿವಾರಣೆ ಆಗಲಿದೆ.
ಈಗಾಗಲೇ 2 ಸಾವಿರ ನೋಟುಗಳನ್ನು ಆರ್ ಬಿಐ 5 ತಿಂಗಳ ಮೊದಲೇ ಮುದ್ರಣ ಸ್ಥಗಿತಗೊಳಿಸಿರುವುದು ಇದೀಗ ಬೆಳಕಿಗೆ ಬಂದಿದೆ. 2018ರ ವರೆಗೆ ದೇಶದಲ್ಲಿ ಒಟ್ಟು 18.03 ಲಕ್ಷ ಕೋಟಿ ಕರೆನ್ಸಿ ಚಲಾವಣೆಯಲಿದ್ದು, ಇದರಲ್ಲಿ 6.73 ಲಕ್ಷ ಕೋಟಿ 2 ಸಾವಿರ ನೋಟುಗಳು ಎಂಬುದು ಗಮನಿಸಬೇಕಾದ ವಿಷಯ.
ಕೇಂದ್ರ ಸರ್ಕಾರ 2 ಸಾವಿರ ನೋಟು ಮುದ್ರಣ ನಿಲ್ಲಿಸಿದೆ
Date: